ಟೀಂ ಇಂಡಿಯಾವನ್ನು ಕಾಡಿದ 'ಸಿಲ್ವಾ' ಆಟಗಾರರು: ಮೂರನೇ ಟೆಸ್ಟ್ ಡ್ರಾ, ಭಾರತಕ್ಕೆ ಸತತ 9ನೇ ಸರಣಿ ಗೆಲುವು

Published : Dec 06, 2017, 04:41 PM ISTUpdated : Apr 11, 2018, 12:46 PM IST
ಟೀಂ ಇಂಡಿಯಾವನ್ನು ಕಾಡಿದ 'ಸಿಲ್ವಾ' ಆಟಗಾರರು: ಮೂರನೇ ಟೆಸ್ಟ್ ಡ್ರಾ, ಭಾರತಕ್ಕೆ ಸತತ 9ನೇ ಸರಣಿ ಗೆಲುವು

ಸಾರಾಂಶ

ಭಾರತ ಈ ಸರಣಿಯೊಂದಿಗೆ ಸತತ 9 ಸರಣಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು. ಈ ಮೊದಲು ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು  

ನವದೆಹಲಿ(ಡಿ.06): ಆಲ್'ರೌಂಡರ್'ಗಳಾದ ಧನಂಜಯ ಸಿಲ್ವಾ,ರೋಷನ್ ಡಿಸಿಲ್ವಾ ಅವರ ಸಮಯೋಚಿತ ಆಟ ಹಾಗೂ ನಾಯಕ ಚಾಂಡಿಮಲ್ ವಿಕೇಟ್ ಕೀಪರ್ ಅವರ ತಾಳ್ಮೆಯ ಆಟದಿಂದಾಗಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಸೋಲುವ ಪಂದ್ಯವನ್ನು ಡ್ರಾನಲ್ಲಿ ಸಮಾಪ್ತಿಗೊಳಿಸಿತು.

3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗುವುದರೊಂದಿಗೆ ಟೀಂ ಇಂಡಿಯಾ ಸರಣಿಯನ್ನು 1-0 ಕೈವಶ ಮಾಡಿಕೊಂಡಿತು. ಭಾರತ ಈ ಸರಣಿಯೊಂದಿಗೆ ಸತತ 9 ಸರಣಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು. ಈ ಮೊದಲು ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು  ಬೌಲರ್'ಗಳು ದಿನವಿಡಿ ಪರದಾಡಿದರೂ ಲಂಕಾ ಪಡೆಯ 2 ವಿಕೇಟ್'ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಧನಂಜಯ ಸಿಲ್ವಾ ಅವರ ಆಕರ್ಷಕ ಶತಕ ಹಾಗೂ ರೋಷನ್ ಸಿಲ್ವಾ ಅವರ ಅಜೇಯ ಅರ್ಧ ಶತಕ ತಂಡವನ್ನು ಸೋಲಿನಿಂದ ಪಾರು ಮಾಡಿತು.

2 ಅದ್ಭುತ ಜೊತೆಯಾಟ

ಧನಂಜಯ,ನಾಯಕ ಚಾಂಡಿಮಲ್ ಅವರ 5ನೇ ವಿಕೇಟ್'ಗೆ 112 ರನ್ ಹಾಗೂ ರೋಶನ್ ಸಿಲ್ವಾ, ಕೀಪರ್ ಡಿಕ್'ವೆಲ್ಲಾ ಅವರ 6ನೇ ವಿಕೇಟ್'ಗೆ ಮುರಿಯದ 94 ರನ್'ಗಳ ಜೊತೆಯಾಟ ಟೀಂ ಇಂಡಿಯಾ ಗೆಲುವನ್ನು ಕಿತ್ತುಕೊಂಡಿತು. 219 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 119 ರನ್ ಬಾರಿಸಿದ ಧನಂಜಯ್ ಗಾಯಗೊಂಡ ನಿವೃತ್ತಿಗೊಂಡರು. ಇವರಿಗೆ ಜೊತೆಯಾಗಿದ್ದ ಚಾಂಡಿಮಲ್ 90 ಎಸೆತಗಳಲ್ಲಿ 36 ರನ್ ಗಳಿಸಿ ಅಶ್ವಿನ್'ಗೆ ಬೌಲ್ಡ್ ಆದರು.

ರೋಷನ್ ಸಿಲ್ವಾ 154 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ 74 ಹಾಗೂ ಡಿಕ್'ವಿಲ್ಲಾ 72 ಚಂಡುಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯರಾಗಿ ಉಳಿದರು. 410 ಗುರಿ ಬೆನ್ನಟ್ಟಿದ ಶ್ರೀಲಂಕಾ ಇನ್ನಿಂಗ್ಸ್ ಅಂತ್ಯಕ್ಕೆ 103 ಓವರ್'ಗಳಲ್ಲಿ 299/5 ರನ್ ಗಳಿಸಿತು. ಕೊನೆಯ ದಿನ ಭಾರತದ ಪರ ಜಡೇಜಾ ಹಾಗೂ ಅಶ್ವಿನ್ ಒಂದೊಂದು ವಿಕೇಟ್ ಮಾತ್ರ ಕಬಳಿಸಿದರು. ಸರಣಿಯಲ್ಲಿ 2 ದ್ವಿಶತಕಗಳೊಂದಿಗೆ ಉತ್ತಮವಾಗಿ ಆಟವಾಡಿದ ನಾಯಕ ಕೊಹ್ಲಿ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.

ಸ್ಕೋರ್

ಭಾರತ 536/7ಡಿ ಹಾಗೂ 246/5ಡಿ

ಶ್ರೀಲಂಕಾ 373 ಹಾಗೂ 299/5(103)

(ಧನಂಜಯ ಸಿಲ್ವಾ 119, ರೋಷನ್ ಸಿಲ್ವಾ 74, ಡಿಕ್ವೆಲ್ಲಾ 44, ಚಾಂಡಿಮಾಲ್ 36, ಜಡೇಜಾ 81/3)

ಪಂದ್ಯ ಹಾಗೂ ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ

ಭಾರತಕ್ಕೆ 1-0 ಸರಣಿ ಜಯ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!