ಶ್ರೀಲಂಕಾಗೆ ಭಾರತದ ವಿರುದ್ಧ 5 ವಿಕೇಟ್ ಜಯ: ಧವನ್ ಆಟ ವ್ಯರ್ಥ

By Suvarna Web DeskFirst Published Mar 6, 2018, 10:35 PM IST
Highlights

ಇದಕ್ಕೂ ಮೊದಲು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲ ಓವರ್'ನಲ್ಲಿಯೇ ರೋಹಿತ್ ಶರ್ಮಾ ಅವರ ವಿಕೇಟ್ ಕಳೆದುಕೊಂಡಿತು. ಖಾತೆಯನ್ನೆ ತೆರೆಯದ ರೋಹಿತ್ ಚಮೀರ್ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು.

ಕೊಲಂಬೊ(ಮಾ.06): ಕುಶಾಲ್ ಮೆಂಡೀಸ್ ಸ್ಫೋಟಕ ಆಟ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರಾದ ತರಂಗ, ಶನಕಾ ಹಾಗೂ  ತಿಶಾರಾ ಪೆರೇರಾ ಅವರ  ಸಮಯೋಚಿತ ಆಟದ ನೆರವಿನಿಂದ ಶ್ರೀಲಂಕಾ ತಂಡ ನಿದಹಾಸ್ ಟ್ರೋಫಿಯ ಮೊದಲ ಟಿ20 ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ 5 ವಿಕೇಟ್'ಗಳ ಜಯಗಳಿಸಿತು.

ಟೀಂ ಇಂಡಿಯಾ ನೀಡಿದ್ದ 175 ರನ್'ಗಳ ಟಾರ್ಗೆಟ್'ಅನ್ನು ಶ್ರೀಲಂಕಾ ತಂಡದವರು 18.3 ಓವರ್'ಗಳಲ್ಲಿ ಗುರಿ ತಲುಪಿದರು. ಕುಶಾಲ್ ಪೆರೇರಾ 66 (37 ಎಸೆತ, 4 ಸಿಕ್ಸ್'ರ್, 6 ಬೌಂಡರಿ) ಭರ್ಜರಿ ಆಟದ  ಹಾಗೂ ಅಂತಿಮ ಓವರ್'ಗಳಲ್ಲಿ ಶನಾಕ(15) ಹಾಗೂ ತಿಶಾರಾ ಪೆರೇರಾ (22) ಅವರ ಉತ್ತಮ ಆಟದಿಂದ ಗೆಲುವು ಸಾಧಿಸಿದರು.   

ಧವನ್ ಉತ್ತಮ ಆಟ

ಇದಕ್ಕೂ ಮೊದಲು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲ ಓವರ್'ನಲ್ಲಿಯೇ ರೋಹಿತ್ ಶರ್ಮಾ ಅವರ ವಿಕೇಟ್ ಕಳೆದುಕೊಂಡಿತು. ಖಾತೆಯನ್ನೆ ತೆರೆಯದ ರೋಹಿತ್ ಚಮೀರ್ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು.

ರೈನಾ ಕೂಡ ಒಂದು ರನ್ ಗಳಿಸಿ ಫರ್ನಾಂಡೋ ಬೌಲಿಂಗ್'ನಲ್ಲಿ ಬೌಲ್ಡ್ ಆದರು.ಮೂರನೇ ವಿಕೇಟ್'ಗೆ ಧವನ್ ಹಾಗೂ ಪಾಂಡೆ 3ನೇ ವಿಕೇಟ್ ನಷ್ಟಕ್ಕೆ 12.4 ಓವರ್'ಗಳಲ್ಲಿ 94 ರನ್ ಪೇರಿಸಿದರು.  37(35 ಎಸೆತ,  3 ಬೌಂಡರಿ, 1 ಸಿಕ್ಸ್'ರ್) ರನ್'ಗಳಿಸಿದ ಮನೀಶ್ ಪಾಂಡೆ ಮೆಂಡೀಸ್ ಬೌಲಿಂಗ್'ನಲ್ಲಿ ಔಟಾದರು.

18ನೇ ಓವರ್'ನ ಕೊನೆಯ ಎಸೆತದಲ್ಲಿ 90 ರನ್ ಗಳಿಸಿದ್ದ ಧವನ್ ಗುಣತಿಲಕಾ ಬೌಲಿಂಗ್'ನಲ್ಲಿ ಪೆರೇರಾಗೆ ಕ್ಯಾಚಿತ್ತು ನಿರ್ಗಮಿಸಿದರು. 49 ಎಸತಗಳ ಇವರ ಅದ್ಭುತ ಆಟದಲ್ಲಿ  6 ಸಿಕ್ಸ'ರ್ ಹಾಗೂ 6 ಬೌಂಡರಿಗಳಿದ್ದವು. ಕೊನೆಯಲ್ಲಿ ರಿಶಬ್ ಪಂತ್ 21 ಚಂಡುಗಳಲ್ಲಿ 1 ಸಿಕ್ಸ್'ರ್'ನೊಂದಿಗೆ 19 ರನ್ ಬಾರಿಸಿದರು. ಶ್ರೀಲಂಕಾ ಪರ ಚಮೀರಾ 33/2,ಮೆಂಡೀಸ್, ಫರ್ನಾಂಡೊ, ಗುಣತಿಲಕ ತಲಾ ಒಂದೊಂದು ವಿಕೇಟ್ ಪಡೆದರು.

 

ಸ್ಕೋರ್

ಭಾರತ  20 ಓವರ್'ಗಳಲ್ಲಿ 174/5

(ಧವನ್ 90, ಪಾಂಡೆ 37, ಚಮೀರಾ 33/2)

ಶ್ರೀಲಂಕಾ 18.3 ಓವರ್'ಗಳಲ್ಲಿ 175/5

(ಪೆರೇರಾ 66, ತಿಶಾರಾ ಪೆರೇರಾ 22, ಸುಂದರ್ 28/2, ಚಹಾಲ್ 37/2)

ಶ್ರೀಲಂಕಾಗೆ 5 ವಿಕೇಟ್ ಜಯ

ಪಂದ್ಯ ಶ್ರೇಷ್ಠ : ಕುಶಾಲ್ ಪೆರೇರಾ

click me!