6ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಡೇಟ್ ಫಿಕ್ಸ್; ಮತ್ತೆ ಕಬಡ್ಡಿ ನೋಡಲು ರೆಡಿಯಾಗಿ

By Suvarna Web DeskFirst Published Jan 19, 2018, 4:18 PM IST
Highlights

5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್'ನಲ್ಲಿ ಪ್ರದೀಪ್ ನರ್ವಾಲ್ ನೇತೃತ್ವದ ಪಟ್ನಾ ಪೈರೇಟ್ಸ್ ತಂಡವು ಗುಜರಾತ್ ಪಾರ್ಚೂನ್'ಜೈಂಟ್ಸ್ ತಂಡವನ್ನು ಮಣಿಸಿ ಸತತ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಮುಂಬೈ(ಜ.19): ಪ್ರೊ ಕಬಡ್ಡಿ 6 ಮತ್ತು 7ನೇ ಆವೃತ್ತಿ ಆರಂಭದ ದಿನಾಂಕವನ್ನು ಆಯೋಜಕರು ಪ್ರಕಟಿಸಿದ್ದು, 6ನೇ ಆವೃತ್ತಿ 2018ರ ಅ.19ರಿಂದ ಆರಂಭಗೊಂಡರೆ 7ನೇ ಆವೃತ್ತಿಗೆ 2019ರ ಜು.19ರಂದು ಚಾಲನೆ ದೊರಕಲಿದೆ. ಕಳೆದ ಆವೃತ್ತಿ ಟೂರ್ನಿಯು ಜುಲೈ 28ರಂದು ಆರಂಭವಾಗಿತ್ತು. ಆದರೆ 6ನೇ ಆವೃತ್ತಿಯು ಸರಿಸುಮಾರು 3 ತಿಂಗಳು ತಡವಾಗಿ ಆರಂಭವಾಗಲಿದೆ.

5ನೇ ಆವೃತ್ತಿ ಮಾದರಿಯಲ್ಲೇ 6 ಮತ್ತು 7ನೇ ಆವೃತ್ತಿಗಳು ಸಹ ನಡೆಯಲಿದ್ದು, 13 ವಾರಗಳ ಕಾಲ ಪಂದ್ಯಾವಳಿ ನಡೆಯಲಿದೆ. ಈ ಬಾರಿಯೂ 12 ತಂಡಗಳನ್ನು ಉಳಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. 5ನೇ ಆವೃತ್ತಿ ವೇಳೆ ಪ್ರೊ ಕಬಡ್ಡಿ ಲೀಗ್‌'ಗೆ ಹೊಸ ರೂಪ ನೀಡಲಾಗಿತ್ತು ತಂಡಗಳ ಸಂಖ್ಯೆಯನ್ನು 8ರಿಂದ 12ಕ್ಕೇರಿಸಲಾಗಿತ್ತು. ಪಂದ್ಯಾವಳಿ ಕಾಲಾವಧಿಯನ್ನು 13 ವಾರಗಳಿಗೆ ವಿಸ್ತರಿಸಲಾಗಿತ್ತು.

5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್'ನಲ್ಲಿ ಪ್ರದೀಪ್ ನರ್ವಾಲ್ ನೇತೃತ್ವದ ಪಟ್ನಾ ಪೈರೇಟ್ಸ್ ತಂಡವು ಗುಜರಾತ್ ಪಾರ್ಚೂನ್'ಜೈಂಟ್ಸ್ ತಂಡವನ್ನು ಮಣಿಸಿ ಸತತ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

click me!