
ಮುಂಬೈ(ಜು.24): ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ, ಕ್ಯಾಪ್ಟನ್ ಕೂಲ್ ಎಂದೇ ಗುರುತಿಸಿಕೊಂಡವರು. ಅದೆಷ್ಟೇ ಒತ್ತಡದ ಸಂದರ್ಭವಿದ್ದರೂ, ಧೋನಿ ತಾಳ್ಮೆ ಕಳೆದುಕೊಂಡಿಲ್ಲ. ಕೂಲ್ ಆಗಿ ಪರಿಸ್ಥಿತಿಯನ್ನ ನಿಭಾಯಿಸಿದ ಹೆಗ್ಗಳಿಕೆಗೆ ಧೋನಿಗಿದೆ.
ಕೂಲ್ ಕ್ಯಾಪ್ಟನ್ಸಿಯಿಂದಲೇ ಐತಿಹಾಸಿಕ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎಂ ಎಸ್ ಧೋನಿಗೆ ಇದೇ ಪ್ರಶ್ನೆ ಕೇಳಲಾಗಿತ್ತು. ಆದರೆ ಈ ಪ್ರಶ್ನೆ ಕೇಳಿದ್ದು ಬಾತ್ ರೂಂನಲ್ಲಿ ಅನ್ನೋದು ವಿಶೇಷ.
ಮಂಬೈನಲ್ಲಿ ನಡೆದ ಮಾಜಿ ಸಚಿವ ಪ್ರಪುಲ್ ಪಟೇಲ್ ಪುತ್ರಿ ಪೂರ್ಣ ಪಟೇಲ್ ವಿವಾಹ ಸಮಾರಂಭದಲ್ಲಿ ಎಂ ಎಸ್ ಧೋನಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಇದೇ ಸಮಾರಂಭದಲ್ಲಿ ಎಂ ಎಸ್ ಧೋನಿಗೆ, ಬಾಲಿವುಡ್ ಸಿಂಗರ್ ರಾಹುಲ್ ವೈದ್ಯ ಬಾತ್ ರೂಂನಲ್ಲಿ ಪ್ರಶ್ನೆ ಕೇಳಿದ್ದಾರೆ.
ಧೋನಿ ಬಾತ್ ರೂಂನಲ್ಲೂ ಯಾಕೆ ಕೂಲ್ ಎಂದು ಬಾತ್ ರೂಂನಲ್ಲೇ ಪ್ರಶ್ನೆ ಕೇಳಿದ್ದಾರೆ. ರಾಹುಲ್ ವೈದ್ಯ ಪ್ರಶ್ನೆಗೆ ಧೋನಿ ನನಗೆ ಗೊತ್ತಿಲ್ಲ ಎಂದು ನಕ್ಕಿದ್ದಾರೆ. ಬಳಿಕ ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಅಪ‌್‌ಲೋಡ್ ಮಾಡಿದ ರಾಹುಲ್, ಇಷ್ಟು ಕೂಲ್ ಆಗಿ ಇರಲು ಹೇಗೆ ಸಾಧ್ಯ? ಧೋನಿಯಿಂದ ಸಾಕಷ್ಟು ಕಲಿಯಲು ಇದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.