ಅಂಡರ್ 19 ವಿಶ್ವಕಪ್: ಪಾಕ್'ನ ಧೂಳಿಪಟ ಮಾಡಿದ ಭಾರತ ಫೈನಲ್'ಗೆ

By Suvarna Web DeskFirst Published Jan 30, 2018, 3:39 PM IST
Highlights

ಶುಬ್ಮಾಮ್ ಗಿಲ್ ಕೊನೆಯವರೆಗೂ ಅಜೇಯರಾಗಿ ಉಳಿದು 94 ಎಸತೆಗಳಲ್ಲಿ 7 ಬೌಂಡರಿಯೊಂದಿಗೆ 102 ಶತಕ ದಾಖಲಿಸಿದರು.

ಕ್ರೈಸ್ಟ್'ಚರ್ಚ್(ಜ.30): ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ತಂಡ 203 ರನ್'ಗಳ ಭಾರಿ ಅಂತರದಿಂದ ಸೋಲಿಸಿ ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್'ನಲ್ಲಿ 6ನೇಬಾರಿ ಫೈನಲ್ ಪ್ರವೇಶಿಸಿದ್ದಾರೆ.

ಕ್ರೈಸ್ಟ್'ಚರ್ಚ್'ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಂಡರ್ 19 ಭಾರತ ತಂಡದ ನಾಯಕ ಪಿಪಿ ಷಾ ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ವಿಕೇಟ್ ನಷ್ಟಕ್ಕೆ ನಾಯಕ ಷಾ(41) ಹಾಗೂ ಮನ್ಜೋತ್ ಕಾರ್ಲ(47) 15.3 ಓವರ್'ಗಳಲ್ಲಿ 89 ರನ್ ದಾಖಲಿಸಿದರು. ನಂತರ ಆಗಮಿಸಿದ ಶುಬ್ಮಾಮ್ ಗಿಲ್ ಕೊನೆಯವರೆಗೂ ಅಜೇಯರಾಗಿ ಉಳಿದು 94 ಎಸತೆಗಳಲ್ಲಿ 7 ಬೌಂಡರಿಯೊಂದಿಗೆ 102 ಶತಕ ದಾಖಲಿಸಿದರು. ಆಲ್'ರೌಂಡರ್ ಎ.ಎಸ್.ರಾಯ್ 33 ರನ್ ಗಳಿಸಿರುವುದನ್ನು ಉಳಿದ ಮಧ್ಯಮ ಕ್ರಮಾಂಕದ ಆಟಗಾರರು ವಿಫಲರಾದರು. ಅಂತಿಮವಾಗಿ ಭಾರತ ತಂದ 50 ಓವರ್'ಗಳಲ್ಲಿ 272 ರನ್ ಗಳಿಸಿತು. ಪಾಕ್ ಪರ ಮೊಹಮದ್ ಮೂಸ 67/4 ಹಾಗೂ ಅರ್ಷದ್ ಇಕ್ಬಾಲ್ 51/3 ಯಶಸ್ವಿ ಬೌಲರ್ ಎನಿಸಿದರು.

ಪೊರೆಲ್, ಪರಾಗ್ ಹಾಗೂ ಶಿವ್ ಬೌಲಿಂಗ್'ಗೆ ಪಾಕ್ ತತ್ತರ

271 ಗುರಿ ಬೆನ್ನತ್ತಿದ ಪಾಕ್ ತಂಡ ವೇಗಿ ಪೊರೆಲ್(17/4) ಹಾಗೂ ಸ್ಪಿನ್ನರ್'ಗಳಾದ ಶಿವ ಸಿಂಗ್(20/2) ಹಾಗೂ ಪರಾತ್(6/2) ದಾಳಿಗೆ ಪಾಕ್ ಅಂಡರ್ 19 ತಂಡ ಧೂಳಿಪಟವಾಯಿತು. ಕೀಪರ್ ರೋಹಿಲ್ ನಾಜೀರ್ (18) ಶಾದ್ ಖಾನ್ (15) ಹಾಗೂ ಬೌಲರ್ ಮೂಸಾ (11) ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್'ಮೆನ್'ಗಳು ಒಂದಂಕಿಯ ಮೊತ್ತ ಗಳಿಸಲಿಲ್ಲ. 29.3 ಓವರ್'ಗಳಲ್ಲಿ 69 ರನ್'ಗಳಿಗೆ ಸರ್ವ ಪತನವಾದರು.

ಸ್ಕೋರ್

ಭಾರತ 50 ಓವರ್'ಗಳಲ್ಲಿ 272

(102 ಅಜೇಯ,ಮೂಸಾ 67/4)

ಪಾಕಿಸ್ತಾನ 29.3 ಓವರ್'ಗಳಲ್ಲಿ 69

(ಪೋರೆಲ್ 17/4,ಶಿವ ಸಿಂಗ್ 20/2)                

ಪಂದ್ಯ ಪುರುಶೋತ್ತಮ: ಶುಬ್ಮಾಮ್ ಗಿಲ್

ಫಲಿತಾಂಶ: ಭಾರತಕ್ಕೆ 203 ರನ್'ಗಳ ಗೆಲುವು

click me!