ಕೊಹ್ಲಿ ಸರದಿಯ ನಂತರ ಗೇಲ್'ನ 2 ವಿಶೇಷ

Published : May 10, 2017, 02:33 PM ISTUpdated : Apr 11, 2018, 12:54 PM IST
ಕೊಹ್ಲಿ ಸರದಿಯ ನಂತರ ಗೇಲ್'ನ 2 ವಿಶೇಷ

ಸಾರಾಂಶ

ಆತನ ಭೀತಿಯುಟ್ಟಿಸುವ ಆ ಸಿಕ್ಸ್'ರ್'ಗಳನ್ನು ನಾನು ಇಷ್ಟ ಪಡುತ್ತೇನೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು(ಮೇ.10): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್'ನಲ್ಲಿ ಎಂದು ನೀಡಿದ ಅತ್ಯಂತ ಕಳಪೆ ಸಾಧನೆ ಮಾಡಿದೆ. ಟೀಂ'ನ ಕಳಪೆ ಸಾಧನೆ ಹಾಗೂ ಸ್ಫೋಟಕ ಆಟಗಾರರು ಏನು ಸಾಧನೆ ಮಾಡದಿರುವ ಬಗ್ಗೆ ಎಲ್ಲಡೆ ಟೀಕೆ ವ್ಯಕ್ತವಾಗಿದ್ದವು.

ಇತ್ತೀಚಿಗಷ್ಟೆ ನಾಯಕ ವಿರಾಟ್ ಕೊಹ್ಲಿ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಭಿಮಾನಿಗಳೆದುರು ಕ್ಷಮೆಯಾಚಿಸಿದ್ದರು. ಈಗ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್'ಗೇಲ್ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ'ನನ್ನ ಎಲ್ಲ ಆರ್'ಸಿಬಿ ಅಭಿಮಾನಿಗಳಿಗೆ ಅತ್ಯಂತ ನೋವಿನಿಂದ ಕ್ಷಮೆಯಾಚಿಸುತ್ತಿದ್ದೇನೆ. ನೀವೆಲ್ಲರೂ ನಮ್ಮನ್ನು ತುಂಬ ಬೆಂಬಲಿಸಿದ್ದೀರಿ, ಆದರೆ ನಿಮ್ಮ ಬೆಂಬಲಕ್ಕೆ ತಕ್ಕ ಹಾಗೆ ನಾವು ಈ ಆವೃತ್ತಿಯಲ್ಲಿ ಪ್ರದರ್ಶನ ನೀಡಲಿಲ್ಲ. ಇದಕ್ಕೆ ನೀವು ಎಲ್ಲ ಪಂದ್ಯಗಳಲ್ಲೂ ನಮ್ಮನ್ನು ಪ್ರೋತ್ಸಾಹಿಸಿದ ರೀತಿ ಹೇಳಲಸಾಧ್ಯ' ಎಂದು ನೋವಿನಿಂದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ಸಂದರ್ಭ'ದಲ್ಲಿ ತಮ್ಮ ದೇಶದ ಮತ್ತೊಬ್ಬ ಸ್ಫೋಟಕ ಆಟಗಾರನಾದ ಕೆಕೆ'ಆರ್' ತಂಡವನ್ನು ಪ್ರತಿನಿಧಿಸುತ್ತಿರುವ ಸುನಿಲ್ ನರೇನ್'ನ ಆಟವನ್ನು ಹೊಗಳಿದ್ದಾರೆ. ' ಸುನಿಲ್ ಆಟವಾಡಿದ ಪರಿ ಅದ್ಭುತವಾದುದು. ಆತನ ಭೀತಿಯುಟ್ಟಿಸುವ ಆ ಸಿಕ್ಸ್'ರ್'ಗಳನ್ನು ನಾನು ಇಷ್ಟ ಪಡುತ್ತೇನೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುನಿಲ್ ನರೇನ್ ಆರ್'ಸಿಬಿ ಪರ 15 ಎಸತೆಗಳಲ್ಲಿ 50 ರನ್ ಗಳಿಸಿ ಕೇವಲ 15 ಓವರ್'ಗಳಲ್ಲಿ ತಂಡ ಗುರಿ ತಲುಪುವುದಕ್ಕೆ ಸಹಕಾರಿಯಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ