2022ರ ಕಾಮನ್ವೆಲ್ತ್'ಗೆ ಮಿಶ್ರ ಕ್ರಿಕೆಟ್ ಎಂಟ್ರಿ; ಶೂಟಿಂಗ್ ಔಟ್!

Published : Dec 22, 2017, 11:54 PM ISTUpdated : Apr 11, 2018, 01:02 PM IST
2022ರ ಕಾಮನ್ವೆಲ್ತ್'ಗೆ ಮಿಶ್ರ ಕ್ರಿಕೆಟ್ ಎಂಟ್ರಿ; ಶೂಟಿಂಗ್ ಔಟ್!

ಸಾರಾಂಶ

2002ರ ಕಾಮನ್‌'ವೆಲ್ತ್ ಗೇಮ್ಸ್‌'ನಿಂದ ಇದುವರೆಗೂ ಭಾರತೀಯ ಶೂಟರ್‌'ಗಳು ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಪದಕಗಳನ್ನು ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಭಾರತದ ಶೂಟರ್'ಗಳು 17 ಪದಕ ಜಯಿಸಿದ್ದರು.

ದುಬೈ(ಡಿ.22): ಕಾಮನ್'ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತವೊಂದು ಎದುರಾಗಿದ್ದು, 2022ರ ಟೂರ್ನಿಯಲ್ಲಿ ಶೂಟಿಂಗ್ ಕೈಬಿಡಲಾಗಿದ್ದು ಮಿಶ್ರ ಟಿ20 ಕ್ರಿಕೆಟ್ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ದುಬೈನಲ್ಲಿ ನಡೆದ ಸಭೆ ವೇಳೆ ಆಯೋಜಕರು ಈ ನಿರ್ಣಯಕ್ಕೆ ಬಂದಿದ್ದಾರೆ. ಆಯೋಜಕರ ಈ ನಿರ್ಧಾರದಿಂದ ಭಾರತಕ್ಕೆ ಭಾರೀ ನಿರಾಸೆಯುಂಟಾಗಿದೆ. 2002ರ ಕಾಮನ್‌'ವೆಲ್ತ್ ಗೇಮ್ಸ್‌'ನಿಂದ ಇದುವರೆಗೂ ಭಾರತೀಯ ಶೂಟರ್‌'ಗಳು ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಪದಕಗಳನ್ನು ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಭಾರತದ ಶೂಟರ್'ಗಳು 17 ಪದಕ ಜಯಿಸಿದ್ದರು.

ಕೂಟದಲ್ಲಿರುವ ಆಟಗಳ ಪಟ್ಟಿಯನ್ನು ಅಂತಿಮಗೊಳಿಸಲು ಮುಂದಿನ ವರ್ಷದ ಕೊನೆಯ ತನಕ ಅವಕಾಶವಿದ್ದು, ಶೂಟಿಂಗ್‌'ಗೆ ಮತ್ತೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆ ಕಸರತ್ತು ನಡೆಸಿಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?
2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!