ರೋಹಿತ್ ಅಬ್ಬರದ ಶತಕ; ಸರಣಿ ಗೆದ್ದ ಟೀಂ ಇಂಡಿಯಾ

Published : Dec 22, 2017, 10:48 PM ISTUpdated : Apr 11, 2018, 01:01 PM IST
ರೋಹಿತ್ ಅಬ್ಬರದ ಶತಕ; ಸರಣಿ ಗೆದ್ದ ಟೀಂ ಇಂಡಿಯಾ

ಸಾರಾಂಶ

ಇದಕ್ಕೂ ಮೊದಲು ನಾಯಕ ರೋಹಿತ್ ಶರ್ಮಾ(118 ರನ್) ಹಾಗೂ ಕೆ.ಎಲ್ ರಾಹುಲ್(89 ರನ್') ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 260 ರನ್ ಕಲೆಹಾಕಿತ್ತು. ಇದರಲ್ಲಿ 210 ರನ್'ಗಳು ಕೇವಲ ಬೌಂಡರಿ ಹಾಗೂ ಸಿಕ್ಸರ್'ಗಳಿಂದ ಬಂದಿದ್ದು ವಿಶೇಷ.

ಇಂದೋರ್(ಡಿ.22): ರೋಹಿತ್ ಶರ್ಮಾ ಆಕರ್ಷಕ ಶತಕ, ರಾಹುಲ್ ಸಮಯೋಚಿತ ಅರ್ಧಶತಕ ಹಾಗೂ ಸ್ಪಿನ್ನರ್'ಗಳ ಮಾಂತ್ರಿಕ ದಾಳಿಯ ನೆರವಿನಿಂದ ಟೀಂ ಇಂಡಿಯಾ 88 ರನ್'ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ಟೀಂ ಇಂಡಿಯಾ ನೀಡಿದ್ದ 261 ರನ್'ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ 4.3 ಓವರ್'ಗಳಲ್ಲಿ 36 ರನ್'ಗಳಿದ್ದಾಗ ಡಿಕ್'ವೆಲ್ಲಾ ಎಡಗೈ ವೇಗಿ ಉನಾದ್ಕಟ್'ಗೆ ಬಲಿಯಾದರು. ಆ ಬಳಿಕ ಜತೆಯಾದ ಉಫುಲ್ ತರಂಗಾ ಹಾಗೂ ಕುಸಾಲ್ ಪೆರೇರಾ ಉತ್ತಮ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೌಲರ್'ಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಈ ಇಬ್ಬರು ಬ್ಯಾಟ್ಸ್'ಮನ್'ಗಳು ಮನಬಂದಂತೆ ಬ್ಯಾಟ್ ಬೀಸುವ ಮೂಲಕ ಶತಕದ ಜತೆಯಾಟವಾಡಿದರು. 10 ಓವರ್'ಗೆ 102 ರನ್ ಬಾರಿಸಿದ ಶ್ರೀಲಂಕಾ ಒಂದು ಹಂತದಲ್ಲಿ ಜಯದತ್ತ ದಿಟ್ಟ ಹೆಜ್ಜೆಯಿಟ್ಟಿತ್ತು.

ಗೇಮ್ ಚೇಂಜ್ ಮಾಡಿದ ಚಾಹಲ್&ಕುಲ್ದೀಪ್:

ಆಕರ್ಷಕ ಬ್ಯಾಟಿಂಗ್'ನಿಂದ ಟೀಂ ಇಂಡಿಯಾವನ್ನು ತಬ್ಬಿಬ್ಬು ಮಾಡಿದ ತರಂಗಾ-ಪೆರೇರಾ ಜೋಡಿಯನ್ನು ಬೇರ್ಪಡಿಸುವಲ್ಲಿ ಚಾಹಲ್ ಕೊನೆಗೂ ಯಶಸ್ವಿಯಾದರು. 14ನೇ ಓವರ್'ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ತರಂಗಾ ಚಾಹಲ್'ಗೆ ವಿಕೆಟ್ ಒಪ್ಪಿಸಿದರು. ಇದಾದ ಮರು ಓವರ್'ನಲ್ಲೇ ಚೈನಾಮ್ಯಾನ್ ಖ್ಯಾತಿಯ ಸ್ಪಿನ್ನರ್ ಒಂದೇ ಓವರ್'ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಈ ವೇಳೆ 15 ಓವರ್ ಮುಕ್ತಾಯಕ್ಕೆ ಲಂಕಾ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು. ಮತ್ತೆ 16ನೇ ಓವರ್'ನಲ್ಲಿ ದಾಳಿಗಿಳಿದ ಚಾಹಲ್ ಕೂಡಾ ಒಂದೇ ಓವರ್'ನಲ್ಲಿ ಮತ್ತೆ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಸಂಪೂರ್ಣ ಟೀಂ ಇಂಡಿಯಾ ಪರ ವಾಲುವಂತೆ ಮಾಡಿದರು. ಅಂತಿಮವಾಗಿ ಶ್ರೀಲಂಕಾ 17.2 ಓವರ್'ಗಳಲ್ಲಿ 9 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ 88 ರನ್'ಗಳ ಭರ್ಜರಿ ಜಯ ಬಾರಿಸಿತು. ಆ್ಯಂಜಲೋ ಮ್ಯಾಥ್ಯೂಸ್ ಗಾಯಾಳುವಾಗಿದ್ದ ಬ್ಯಾಟಿಂಗ್'ಗಿಳಿಯಲಿಲ್ಲ.

ಇದಕ್ಕೂ ಮೊದಲು ನಾಯಕ ರೋಹಿತ್ ಶರ್ಮಾ(118 ರನ್) ಹಾಗೂ ಕೆ.ಎಲ್ ರಾಹುಲ್(89 ರನ್') ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 260 ರನ್ ಕಲೆಹಾಕಿತ್ತು. ಇದರಲ್ಲಿ 210 ರನ್'ಗಳು ಕೇವಲ ಬೌಂಡರಿ ಹಾಗೂ ಸಿಕ್ಸರ್'ಗಳಿಂದ ಬಂದಿದ್ದು ವಿಶೇಷ.

ಸಂಕ್ಷಿಪ್ತ ಸ್ಕೋರ್:

ಭಾರತ: 260/5

ರೋಹಿತ್ ಶರ್ಮಾ: 118

ಕೆ.ಎಲ್ ರಾಹುಲ್: 89

ಪೆರೇರಾ: 49/2

ಶ್ರೀಲಂಕಾ: 172/9

ಕುಸಾಲ್ ಪೆರೇರಾ: 77

ಉಫುಲ್ ತರಂಗಾ: 47

ಯಜುವೇಂದ್ರ ಚಾಹಲ್: 52/4

ಫಲಿತಾಂಶ: ಭಾರತಕ್ಕೆ 88 ರನ್'ಗಳ ಜಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?
2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!