
ಹರಾರೆ(ಜು.02): ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಆಲ್‌ಲೌಂಡರ್ ಶೋಯಿಬ್ ಮಲ್ಲಿಕ್ ದಾಖಲೆ ಬರೆದಿದ್ದಾರೆ. ಜಿಂಬಾಬ್ವೆ, ಆಸ್ಟೇಲಿಯಾ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಆಸಿಸ್ ವಿರುದ್ಧದ 2ನೇ ಪಂದ್ಯ ಆಡೋ ಮೂಲಕ ಗರಿಷ್ಠ ಟಿ20 ಪಂದ್ಯ ಆಡಿದ ದಾಖಲೆ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಶೋಯಿಬ್ ಮಲ್ಲಿಕ್ ಪಾಲಿಗೆ 100ನೇ ಟಿ20 ಪಂದ್ಯ. ಈ ಮೂಲಕ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ದಾಖಲೆಯನ್ನ ಮುರಿದಿದ್ದಾರೆ. ಅಫ್ರಿದಿ ಓಟ್ಟು 99 ಟಿ20 ಪಂದ್ಯ ಆಡಿದ್ದಾರೆ.
100ನೇ ಪಂದ್ಯದಲ್ಲಿ ಶೋಯಿಬ್ ಮಲ್ಲಿಕ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಕೇವ 13 ರನ್‌ಗಳಿಸಿ ರನೌಟ್‌ಗೆ ಬಲಿಯಾದರು. ಇಷ್ಟೇ ಅಲ್ಲ ಈ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ.
ಶೋಯಿಬ್ ಮಲ್ಲಿಕ್ 100 ಟಿ20 ಪಂದ್ಯ ಆಡೋ ಮೂಲಕ ಗರಿಷ್ಟ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಹೆಗ್ಗಳಿಕೆಗೆ ಪಾತ್ರರಾದರೆ, ಶಾಹಿದ್ ಅಫ್ರಿದಿ 99 ಪಂದ್ಯ ಆಡೋ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ 90 ಪಂದ್ಯ ಆಡೋ ಮೂಲಕ 3ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.