ಗಬ್ಬರ್ ಸಿಂಗ್'ಗೆ ಹೊಡೆಯಿತು ಬಂಪರ್: ಟೆಸ್ಟ್ ತಂಡಕ್ಕೂ ಕಮ್'ಬ್ಯಾಕ್ ಮಾಡಿದ ಧವನ್

Published : Jul 18, 2017, 11:20 AM ISTUpdated : Apr 11, 2018, 12:51 PM IST
ಗಬ್ಬರ್ ಸಿಂಗ್'ಗೆ ಹೊಡೆಯಿತು ಬಂಪರ್: ಟೆಸ್ಟ್ ತಂಡಕ್ಕೂ ಕಮ್'ಬ್ಯಾಕ್ ಮಾಡಿದ ಧವನ್

ಸಾರಾಂಶ

ಶಿಖರ್ ಧವನ್​'ಗೆ ಅದೃಷ್ಟ ಚೆನ್ನಾಗಿದೆ. ಕಳಪೆ ಫಾರ್ಮ್​'ನಿಂದ ಬಳಲಿ ಟೀಂ ಇಂಡಿಯಾದಿಂದ ಹೊರಬಿದ್ದರೂ ಮತ್ತೆಮತ್ತೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಈಗ ಅವರು ಟೆಸ್ಟ್​ ತಂಡಕ್ಕೂ ಸೆಲೆಕ್ಟ್ ಆಗಿದ್ದಾರೆ. ಲಂಕಾ ಟೂರ್​ನಲ್ಲೇ ಅವರೇ ಓಪನರ್

ಶಿಖರ್ ಧವನ್​'ಗೆ ಅದೃಷ್ಟ ಚೆನ್ನಾಗಿದೆ. ಕಳಪೆ ಫಾರ್ಮ್​'ನಿಂದ ಬಳಲಿ ಟೀಂ ಇಂಡಿಯಾದಿಂದ ಹೊರಬಿದ್ದರೂ ಮತ್ತೆಮತ್ತೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಈಗ ಅವರು ಟೆಸ್ಟ್​ ತಂಡಕ್ಕೂ ಸೆಲೆಕ್ಟ್ ಆಗಿದ್ದಾರೆ. ಲಂಕಾ ಟೂರ್​ನಲ್ಲೇ ಅವರೇ ಓಪನರ್​.

ಅದೃಷ್ಟ ಅಂದರೆ ಹೀಗಿರಬೇಕು. ಕಳಪೆ ಫಾರ್ಮ್​'ನಿಂದ ಬಳಲಿ ಮೂರು ಮಾದರಿ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದ ಶಿಖರ್ ಧವನ್​ಗೆ ಈಗ ಲಕ್​ ತಿರುಗಿದೆ. ಇನ್ನೇನು ಗಬ್ಬರ್ ಸಿಂಗ್ ಕ್ರಿಕೆಟ್ ಲೈಫ್ ಕ್ಲೋಸ್ ಆಯ್ತು ಅಂತ ಬೊಬ್ಬೆ ಹೊಡೆಯಲು ಶುರು ಮಾಡೋ ಟೈಮ್ ಬಂದಿತ್ತು. ಅಷ್ಟರಲ್ಲಿ ಅದೃಷ್ಟ ಅವರಿಗೆ ಕೈ ಹಿಡಿಯಿತು. ಆಗ ಹಿಡಿದಿದ್ದ ಅದೃಷ್ಟವೇ ಈಗ ಕೈ ಹಿಡಿದಿದೆ. ಈಗ ಟೆಸ್ಟ್​ ತಂಡಕ್ಕೂ ಕಮ್​ಬ್ಯಾಕ್ ಮಾಡಿದ್ದಾರೆ.

ರಾಹುಲ್ ಬದಲಿಗೆ ಚಾಂಪಿಯನ್ಸ್ ಟ್ರೋಫಿ ಆಡಿದ ಧವನ್: ಈಗ ಸೀಮಿತ ಓವರ್​'ಗಳ ತಂಡದಲ್ಲಿ ಸ್ಥಾನ ಖಾಯಂ

ಕಳಪೆ ಫಾರ್ಮ್'​ನಿಂದ ಬಳಲಿದ್ದ ಶಿಖರ್ ಧವನ್​ರನ್ನ ಮೂರು ಮಾದರಿ ತಂಡದಿಂದ ಕಿಕೌಟ್ ಮಾಡಲಾಗಿತ್ತು. ಆದರೆ ಕನ್ನಡಿಗ ಕೆಎಲ್ ರಾಹುಲ್ ಇಂಜುರಿಯಾಗಿದ್ದರಿಂದ ಅವರ ಬದಲಿಗೆ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆದರು. ಇಂಗ್ಲೆಂಡ್​'ನಲ್ಲಿ ರನ್ ಕೊಳ್ಳೆ ಹೊಡೆದು ಮಿಂಚಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡೋ ಮೂಲ್ಕ ಹಲವು ದಾಖಲೆಗಳನ್ನ ಮಾಡಿದ್ದರು. ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಗರಿಷ್ಠ ರನ್ ಸರದಾರರಾಗಿ ಗೋಲ್ಡನ್ ಬ್ಯಾಟ್ ಸಹ ಪಡೆದಿದ್ದರು.

ಇನ್ನು ವೆಸ್ಟ್​ ಇಂಡೀಸ್​​ ವಿರುದ್ಧದ ಸರಣಿಗೂ ಆಯ್ಕೆಯಾದ ಧವನ್​, ಅಲ್ಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ರು. ಮೊದಲೆರಡು ಪಂದ್ಯದಲ್ಲಿ ಹಾಫ್ ಸೆಂಚುರಿ ಹೊಡೆದಿದ್ದರು. ಈ ಮೂಲ್ಕ ಸೀಮಿತ ಓವರ್​​ಗಳ ತಂಡದಲ್ಲಿ ಸ್ಥಾನವನ್ನ ಖಾಯಂ ಮಾಡಿಕೊಂಡ್ರು.

ವಿಜಯ್​ ಲಂಕಾ ಸರಣಿಯಿಂದ ಔಟ್​: ವಿಜಯ್ ಬದಲಿಗೆ ಟೆಸ್ಟ್​ ತಂಡಕ್ಕೆ ಸೆಲೆಕ್ಟ್

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್​​'ಗಳ ಸರಣಿಗೆ ಶಿಖರ್ ಧವನ್ ಆಯ್ಕೆಯಾಗಿರಲಿಲ್ಲ. ಆದರೆ ಈಗ ಮುರಳಿ ವಿಜಯ್​ ಬದಲಿಗೆ ಸೆಲೆಕ್ಟ್ ಆಗಿದ್ದಾರೆ. ಚೆನ್ನೈ ಬ್ಯಾಟ್ಸ್​ಮನ್​ ವಿಜಯ್, ಮಣಿಕಟ್ಟು ನೋವಿನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವರು ಇಂಜುರಿಯಾಗಿದ್ದರು. ಈಗ ಅವರ ಬದಲಿಗೆ ಧವನ್ ಲಂಕಾ ಪ್ಲೈಟ್ ಹತ್ತಲಿದ್ದಾರೆ.

ಟೆಸ್ಟ್ ತಂಡದಲ್ಲೂ ಮಾಡಿಕೊಳ್ತಾರಾ ಖಾಯಂ ಸ್ಥಾನ..?

ಇಡೀ ಟೀಂ ಇಂಡಿಯಾದಿಂದ ಟ್ರಾಪ್ ಮಾಡಿದಕ್ಕೆ ನಿರಾಸೆ ಅನುಭವಿಸಿದ್ದ ಧವನ್, ಒಂಡೇ ಟೀಮ್'​ಗೆ ಸೆಲೆಕ್ಟ್ ಆಗುತ್ತಿದಂತೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರಿಸಿ, ತನ್ನೆಲ್ಲಾ ಸೇಡನ್ನ ತೀರಿಸಿಕೊಂಡ್ರು. ಟೀಕಾಕಾರರಿಗೆ ಬ್ಯಾಟ್​ನಿಂದ ಉತ್ತರಿಸಿದ್ದರು. ಈಗ ಟೆಸ್ಟ್​ ತಂಡದಲ್ಲೂ ಸ್ಥಾನ ಸಿಕ್ಕಿದೆ. ಟೆಸ್ಟ್​​ನಲ್ಲೂ ಉತ್ತಮ ಪ್ರದರ್ಶನ ನೀಡೋ ಮೂಲ್ಕ ತನ್ನ ಸ್ಥಾನವನ್ನ ಇಲ್ಲೂ ಖಾಯಂ ಮಾಡಿಕೊಳ್ತಾರಾ. ಅದನ್ನ ಶ್ರೀಲಂಕಾ ಸರಣಿ ಡಿಸೈಡ್ ಮಾಡುತ್ತೆ.

ವಿದೇಶದಲ್ಲಿರುವ ಧವನ್​​​​​ ಭಾರತಕ್ಕೆ ವಾಪಾಸ್: ಟೆಸ್ಟ್​​​ ಸರಣಿಗೆ ನಡೆಸಬೇಕಿದೆ ತಯಾರಿ

ಲಂಕಾ ಟೆಸ್ಟ್​ ಸಿರೀಸ್'​ಗೆ ಆಯ್ಕೆಯಾಗದೆ ಇದ್ದ ಧವನ್, ಹೆಂಡತಿ ಮಕ್ಕಳ ಜೊತೆ ವಿದೇಶಕ್ಕೆ ಹಾರಿದ್ದರು. ಅಲ್ಲಿ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಈಗ ಅವರಿಗೆ ಟೆಸ್ಟ್​ ತಂಡಕ್ಕೆ ಬುಲಾವ್ ನೀಡಿದ್ದರಿಂದ ಭಾರತಕ್ಕೆ ವಾಪಾಸ್ ಆಗಬೇಕಿದೆ. ಟೆಸ್ಟ್​​ ಸರಣಿಗಾಗಿ ವಿಶೇಷ ತಯಾರಿ ಮಾಡಬೇಕಿದೆ. ಆಡಿದ ಚೊಚ್ಚಲ ಟೆಸ್ಟ್​​​'ನಲ್ಲೇ ದಾಖಲೆಯ 187 ರನ್ ಬಾರಿಸಿದ್ದ ಗಬ್ಬರ್ ಸಿಂಗ್, ಈಗ ಸಿಂಹಳೀಯರ ನಾಡಲ್ಲಿ ಘರ್ಜಿಸಲು ರೆಡಿಯಾಗಬೇಕಿದೆ.

ಶಿಖರ್ ಧವನ್ ಟೆಸ್ಟ್​​ ರೆಕಾರ್ಡ್​ ಹೀಗಿದೆ. 23 ಟೆಸ್ಟ್​ಗಳನ್ನಾಡಿರುವ ಗಬ್ಬರ್ ಸಿಂಗ್​ 38.52ರ ಸರಾಸರಿಯಲ್ಲಿ 1464 ರನ್ ಹೊಡೆದಿದ್ದಾರೆ. 4 ಶತಕ, 3 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.

ಜುಲೈ 26ರಿಂದ ಭಾರತ-ಶ್ರೀಲಂಕಾ ಟೆಸ್ಟ್​ ಸಿರೀಸ್ ಆರಂಭವಾಗುತ್ತಿದೆ. ರಾಹುಲ್ ಮತ್ತು ಅಭಿನವ್ ಮುಕುಂದ್ ಇಬ್ಬರೂ ಓಪರ್​ಗಳಿದ್ದಾರೆ. ರಾಹುಲ್ ಆಡುವುದು ಕನ್ಫರ್ಮ್​. ಇನ್ನೊಂದು ಸ್ಥಾನಕ್ಕೆ ಧವನ್ ವರ್ಸಸ್ ಮುಕುಂದ್ ನಡ್ವೆ ಫೈಟ್ ಬಿದ್ದಿದೆ. ಹಸಿದ ಹೆಬ್ಬುಲಿಯಂತಯಾಗಿರುವ ಗಬ್ಬರ್​ ಸಿಂಗ್'​ಗೆ ಚಾನ್ಸ್ ಸಿಕ್ಕರೆ ಸಿಂಹಗಳ ಬೇಟೆಯಾಡೋದ್ರಲ್ಲಿ ನೋ ಡೌಟ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?