ವಾಟ್ಸನ್ ಶತಕ ಏನೆಲ್ಲಾ ದಾಖಲೆ ಬರೆದಿದೆ ಗೊತ್ತಾ?

First Published May 28, 2018, 12:30 PM IST
Highlights

ನಿನ್ನೆ ಮುಕ್ತಾಯ ಕಂಡ ಐಪಿಎಲ್-2018 ರ ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆಯಲಾಗಿದೆ.  ಹೈದರಾಬಾದ್ ಮತ್ತು ಚೆನೈ ನಡುವಿನ ರೋಚಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಸಿಸ್ ಆಟಗಾರ ಶೇನ್ ವಾಟ್ಸನ್ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರು(ಮೇ 28): ನಿನ್ನೆ ಮುಕ್ತಾಯ ಕಂಡ ಐಪಿಎಲ್-2018 ರ ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆಯಲಾಗಿದೆ.  ಹೈದರಾಬಾದ್ ಮತ್ತು ಚೆನೈ ನಡುವಿನ ರೋಚಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಸಿಸ್ ಆಟಗಾರ ಶೇನ್ ವಾಟ್ಸನ್ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ವಾಟ್ಸನ್ ಎರಡು ಬಾರಿ ಶತಕ ಸಿಡಿಸಿದ್ದಾರೆ. ಅಲ್ಲದೇ ಫೈನಲ್ ನಲ್ಲಿ ಶತಕ ಸಿಡಿಸಿ ಗೆಲುವು ಕಂಡ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಫೈನಲ್ ಪಂದ್ಯದಲ್ಲಿ ಅತ್ಯಧಿಕ ರನ್ ಸಿಡಿಸಿದ ದಾಖಲೆ ಕೂಡ ವಾಟ್ಸನ್ ಪಾಲಾಗಿದೆ. ಈ ಮೊದಲು ವೃದ್ದಿಮಾನ್ ಸಹಾ ಫೈನಲ್ ಪಂದ್ಯದಲ್ಲಿ 115 ರನ್ ಗಳಿಸಿದ್ದರು. ಆದರೆ ಸಹಾ ಸೋಲಿನ ರುಚಿ ಅನುಭವಿಸಿದ್ದರೆ ವಾಟ್ಸನ್ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಫೈನಲ್ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ಆಟಗಾರರ ಪಟ್ಟಿ ನೋಡುವುದಾದರೆ-

1. ಶೇನ್ ವಾಟ್ಸನ್(117)-2018
2. ಮನೀಷ್ ಪಾಂಡೆ(94)-2014
3. ಮನ್ವಿಂದರ್ ಬಿಸ್ಲಾ(89)-೨2012
4. ಕ್ರಿಸ್ ಗೇಲ್(76)-2016

ಹೀಗೆ ಶೇನ್ ವಾಟ್ಸನ್ ನಿನ್ನೆ ಸಿಡಿಸಿದ ಆಕರ್ಷಕ ಶತಕ ಗೆಲುವಿನ ಜೊತೆಗೆ ಹಲವು ವಿಶಿಷ್ಟ ದಾಖಲೆಗಳನ್ನು ಕೂಡ ಬರೆದಿರುವುದು ಸಿಎಸ್ ಕೆ ಅಭಿಮಾನಿಗಳಿಗೆ ಸಂತಸ ತಂದಿದೆ. ಪಂದ್ಯದ ಬಳಿಕ ತಂಡದ ನಾಯಕ ಎಂ.ಎಸ್. ಧೋನಿ ಆಟಗಾರನ ಫಿಟ್ನೆಸ್ ಪ್ರಮುಖವೇ ಹೊರತು ವಯಸ್ಸಲ್ಲ ಎಂದು ಹೇಳಿರುವುದು ಇದೇ ಕಾರಣಕ್ಕೆ ಎಂಬ ಮಾತುಗಳು ಕೇಳಿ ಬರುತ್ತಿವೆ.  

click me!