
ಮೆಲ್ಬೋರ್ನ್(ಡಿ.22): ಕ್ರಿಕೆಟ್ ಜಗತ್ತು ಕಂಡ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್'ಮನ್'ಗಳನ್ನೊಳಗೊಂಡ 11 ಮಂದಿ ತಂಡವನ್ನು ಅನಾವರಣ ಮಾಡಿದ್ದಾರೆ.
1992ರಿಂದ 2007ರವರೆಗೆ ಕ್ರಿಕೆಟ್ ಜಗತ್ತನ್ನು ಆಳಿದ ಮಾರಕ ಲೆಗ್ ಸ್ಪಿನ್ನರ್ ವಾರ್ನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್'ಗೆ ಜಂಟಿ 10ನೇ ಸ್ಥಾನ ನೀಡಿದ್ದಾರೆ. ವಾರ್ನ್ ತಾವು ಕಂಡ ಹಾಗೂ ತಾವೆದುರಿಸಿದ ಹಾಗೂ ತಮ್ಮೊಟ್ಟಿಗೆ ಆಡಿದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್'ಮನ್'ಗಳನ್ನು ಪಟ್ಟಿ ಮಾಡಿದ್ದಾರೆ.
ವಾರ್ನ್ ಪ್ರಕಾರ ವೆಸ್ಟ್'ಇಂಡಿಸ್ ದಂತಕತೆಗಳೆನಿಸಿರುವ ಸರ್. ವೀವ್ ರಿಚರ್ಡ್ಸ್ ಹಾಗೂ ಬ್ರಿಯನ್ ಲಾರಾ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನ ಪಡೆದಿದ್ದಾರೆ.
ಆ ಬಳಿಕ ಆಸೀಸ್ ದಿಗ್ಗಜ ಬ್ಯಾಟ್ಸ್'ಮನ್'ಗಳಾದ ಗ್ರೇಗ್ ಚಾಪೇಲ್, ರಿಕಿ ಪಾಂಟಿಂಗ್ ಹಾಗೂ ಅಲನ್ ಬಾರ್ಡರ್ ಕ್ರಮವಾಗಿ 4,5,6ನೇ ಸ್ಥಾನ ಪಡೆದಿದ್ದಾರೆ. ಆ ನಂತರ ಏಳು ಹಾಗೂ 9ನೇ ಸ್ಥಾನವನ್ನು ಜಾಕ್ ಕಾಲೀಸ್ ಮತ್ತು ಎಬಿ ಡಿವಿಲಿಯರ್ಸ್ ಅಲಂಕರಿಸಿದ್ದರೆ, ಎಂಟನೇ ಸ್ಥಾನದಲ್ಲಿ ಗ್ರಹಂ ಗೂಚ್'ಯಿದ್ದು ವಾರ್ನ್ ಗುರುತಿಸಿರುವ ಶ್ರೇಷ್ಠ ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಇಂಗ್ಲೆಂಡ್ ಆಟಗಾರರೆನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.