2019ರ ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಶೇನ್ ವಾರ್ನ್!

By Web Desk  |  First Published Feb 12, 2019, 8:28 PM IST

ಸ್ಪಿನ್ ದಿಗ್ಗಜ ಶೇನ್ ವಾರ್ನ್ 2019ರ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡವನ್ನ ಪ್ರಕಟಿಸಿದ್ದಾರೆ. ವಾರ್ನ್ ಪ್ರಕಟಿಸಿದ ತಂಡದಲ್ಲಿ ಯಾರಿಗೆ ಅವಕಾಶ ನೀಡಲಾಗಿದೆ. ಯಾರಿಗೆ ಕೊಕ್? ಇಲ್ಲಿದೆ ವಿವರ.


ಸಿಡ್ನಿ(ಫೆ.12): ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಯಾರಿ ಆರಂಭಿಸಿದೆ. ಬಾಲ್ ಟ್ಯಾಂಪರ್‌ನಿಂದ ಅಮಾನತಿಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾ ತಂಡ ಕಳಪೆಯಾಗಿದೆ. ಆದರೆ ಮಾಜಿ ಕ್ರಿಕೆಟಿಗ ಶೇನ್ ವಾರ್ನ್, ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕಾರು ಅಪಘಾತದಲ್ಲಿ ಸುರೇಶ್ ರೈನಾ ಸಾವು- ಸುಳ್ಳು ಸುದ್ದಿ ಹಬ್ಬಿದವರಿಗೆ ತಿರುಗೇಟು!

Tap to resize

Latest Videos

ಸ್ಪಿನ್ ದಿಗ್ಗಜ ಶೇನ್  ವಾರ್ನ್, ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ್ದಾರೆ. ವಾರ್ನ್ ತಂಡದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ವಾರ್ನ್ ಬಲಿಷ್ಠ ತಂಡವನ್ನ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ರೋಹಿತ್’ಗೆ ರೆಸ್ಟ್; ಈ ಇಬ್ಬರಿಗೆ ವಿಶ್ವಕಪ್ ಎಂಟ್ರಿ ಕೊಡಲು ಕೊನೆಯ ಚಾನ್ಸ್..?

ವಾರ್ನ್ ಪ್ರಕಟಿಸಿದ ಆಸ್ಟ್ರೇಲಿಯಾ ವಿಶ್ವಕಪ್ ತಂಡ:
ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡಾರ್ಕಿ ಶಾರ್ಟ್, ಶಾನ್ ಮಾರ್ಶ್, ಮಾರ್ಕಸ್ ಸ್ಟೋಯಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಡೇ ರಿಚರ್ಡ್ಸನ್
 

click me!