ಟಿ20 ತಂಡಕ್ಕೆ ಶಕೀಬ್ ನಾಯಕ

By Suvarna Web DeskFirst Published Apr 23, 2017, 11:54 AM IST
Highlights

ಶಕೀಬ್ ಇಲ್ಲಿಯವರೆಗೆ 59 ಅಂತರಾಷ್ಟ್ರಿಯ ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸಿದ್ದಾರೆ.

ಢಾಕಾ(ಏ.23): ಬಾಂಗ್ಲಾದೇಶ ಟಿ20 ತಂಡದ ನೂತನ ನಾಯಕರಾಗಿ ಅನುಭವಿ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ನೇಮಕಗೊಂಡಿದ್ದಾರೆ.

ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದ ಮಶ್ರಫೆ ಮೊರ್ತಜಾ ಸ್ಥಾನವನ್ನು ಶಕೀಬ್‌ ತುಂಬಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ.

2009-11ರ ವರೆಗೂ ಎಲ್ಲಾ ಮಾದರಿಯ ಕ್ರಿಕೆಟ್‌'ನಲ್ಲೂ ಬಾಂಗ್ಲಾ ತಂಡವನ್ನು ಮುನ್ನಡೆಸಿದ್ದ ಶಕೀಬ್‌, 4 ಟಿ20 ಪಂದ್ಯಗಳಿಗೆ ನಾಯಕರಾಗಿದ್ದರು. ನಾಲ್ಕೂ ಪಂದ್ಯಗಳಲ್ಲಿ ಬಾಂಗ್ಲಾ ಸೋಲನುಭವಿಸಿತು. ಬಾಂಗ್ಲಾದ ಮೂರು ಮಾದರಿಯ ತಂಡಗಳಿಗೆ ಮೂರು ಪ್ರತ್ಯೇಕ ನಾಯಕರುಗಳಿದ್ದು, ಟೆಸ್ಟ್‌ ತಂಡವನ್ನು ಮುಷ್ಫಿಕರ್‌ ರಹೀಮ್ ಮುನ್ನಡೆಸಿದರೆ, ಏಕದಿನ ತಂಡಕ್ಕೆ ಮಶ್ರಫೆ ಮೊರ್ತೊಜಾ ನಾಯಕರಾಗಿದ್ದಾರೆ. 

ಶಕೀಬ್ ಇಲ್ಲಿಯವರೆಗೆ 59 ಅಂತರಾಷ್ಟ್ರಿಯ ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸಿದ್ದಾರೆ.

click me!