
ಕರಾಚಿ(ಜೂ.14): ಪಾಕಿಸ್ತಾನ ಪರ ಸುಮಾರು 20 ವರ್ಷಗಳ ಕಾಲ ಅಂತರಾಷ್ಟ್ರೀಯ ಪಂದ್ಯವಾಡಿದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಲೆಗ್ ಬಿಫೋರ್ ವಿಕೆಟ್(ಎಲ್'ಬಿಡಬ್ಲ್ಯೂ) ಅಂದ್ರೇನು ಅಂತಾನೆ ಗೊತ್ತಿಲ್ಲಾ ಅಂದ್ರೆ ನೀವು ನಂಬ್ತೀರಾ..?
ಹೌದು ಈ ಮಾತನ್ನು ಬೇರೆ ಯಾರಾದ್ರು ಹೇಳಿದ್ರೆ ನಂಬೋದು ಕಷ್ಟ ಆಗ್ತಿತ್ತು. ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ (ಟೆಸ್ಟ್, ಏಕದಿನ ಹಾಗೂ ಟಿ20 ವಿಭಾಗ ಸೇರಿ) 10 ಸಾವಿರ ರನ್ ಹಾಗೂ ನೂರಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ಸ್ವತಃ ಅಫ್ರಿದಿಗೆ ಕ್ರಿಕೆಟ್'ನ ಎಲ್'ಬಿಡಬ್ಲ್ಯೂದ ಪರಿಭಾಷೆ ಗೊತ್ತಿಲ್ಲ..! ಪಾಕಿಸ್ತಾನದ ಒಂದು ಟಿವಿ ಕಾರ್ಯಕ್ರಮದಲ್ಲಿ ಅಫ್ರಿದಿಗೆ ಎಲ್'ಬಿಡಬ್ಲ್ಯೂ ಅರ್ಥವೇ ಗೊತ್ತಿಲ್ಲದೇ ಮುಜುಗೆಕ್ಕೀಡಾದ ಘಟನೆ ನಡೆದಿದೆ.
ಕಾರ್ಯಕ್ರಮದ ನಿರೂಪಕ ಅಫ್ರಿದಿಗೆ ಎಲ್'ಬಿಡಬ್ಲ್ಯೂ ಕುರಿತಂತೆ ಸಾಕಷ್ಟು ಸುಳಿವು ಕೊಟ್ಟರು, ಎಲ್'ಬಿಡಬ್ಲ್ಯೂ ಅರ್ಥ ಗ್ರಹಿಸಿ ಉತ್ತರಿಸಲು ಸಾಧ್ಯವಾಗಲಿಲ್ಲ.
ಈ ಕಾರ್ಯಕ್ರಮ ವೀಕ್ಷಿಸಿದ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.