ಕೆರಿಬಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದ ಆಫ್ರಿದಿ

By Web DeskFirst Published Aug 8, 2018, 7:22 PM IST
Highlights

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಭ್ಯಾಸ ಆರಂಭಿಸಿದ್ದ ಅಫ್ರಿದಿ ದಿಢೀರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಶಾಹಿದ್ ಆಫ್ರಿದಿ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ.

ಕರಾಚಿ(ಆ.08): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ವಿದಾಯದ ಬಳಿಕ ಲೀಗ್ ಟೂರ್ನಿಗಳಲ್ಲಿ ಸಕ್ರಿಯರಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದ ಅಫ್ರಿದಿ ಇದೀಗ ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿಯ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದಲೂ ಹಿಂದೆ ಸರಿದಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶಾಹಿದ್ ಆಫ್ರಿದಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಡದಿರಲು ನಿರ್ಧರಿಸಿದ್ದಾರೆ. ಇಂಜುರಿ ಕಾರಣದಿಂದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಕೆಲ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅಫ್ರಿದಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

 

Due to my knee rehab I’ll have to sadly miss out this year’s with the
I’ll be cheering for the team from home and I’m sure will fill up for me https://t.co/zJ6C8mI22A

— Shahid Afridi (@SAfridiOfficial)

 

ಮೊಣಕಾಲಿನ ಗಾಯದಿಂದ ಟೂರ್ನಿಯಿಂದ ಹಿಂದೆ ಸರಿಯೋದಾಗಿ ಆಫ್ರಿದಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಅಫ್ರಿದಿ ಅಲಭ್ಯತೆಯನ್ನ ಸ್ಪಷ್ಟಪಡಿಸಿದ್ದಾರೆ. 38  ವರ್ಷದ ಆಫ್ರಿದಿ ಕೆರಿಬಿಯನ್ ಲೀಗ್ ಟೂರ್ನಿಯಲ್ಲಿ ಜಮೈಕಾ ತಲೈವಾಸ್ ತಂಡವನ್ನ ಪ್ರತಿನಿಧಿಸುತ್ತಿದ್ದರು.

click me!