ಬಯಲಾಯ್ತು ಅಫ್ರಿದಿ ಬೂಮ್ ಬೂಮ್ ಖ್ಯಾತಿಯ ರಹಸ್ಯ!

By Web DeskFirst Published Aug 27, 2018, 5:31 PM IST
Highlights

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೂಮ್ ಬೂಮ್ ಅಫ್ರಿದಿ ಎಂದೇ ಹೆಸರುವಾಸಿ. ಆದರೆ ಅಫ್ರಿದಿಗೆ ಬೂಮ್ ಬೂಮ್ ಹೆಸರಿಟ್ಟದ್ದು ಯಾರು ಅನ್ನೋದು ಬಹಿರಂಗವಾಗಿದೆ.
 

ಲಾಹೋರ್(ಆ.27): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಕೇವಲ 37 ಎಸೆತದಲ್ಲಿ ಸೆಂಚುರಿ ಸಿಡಿಸೋ ಮೂಲಕ ಅತೀ ವೆೇಗದ ಶತಕ ಸಿಡಿಸಿದ  ಬ್ಯಾಟ್ಸ್‌ಮನ್. ಸುಮಾರು 17 ವರ್ಷಗಳ ಕಾಲ ಅಫ್ರಿದಿ ದಾಖಲೆ ಹಾಗೇ ಉಳಿದಿತ್ತು. 

ಪ್ರತಿ ಎಸೆತವನ್ನೂ ಸಿಕ್ಸರ್‌ಗೆ ಅಟ್ಟೋ ಕಲೆ ಅಫ್ರಿದಿಗೆ ತಿಳಿದಿತ್ತು. ಹೀಗಾಗಿಯೇ ಶಾಹಿದ್ ಆಫ್ರಿದಿಗೆ ಬೂಮ್ ಬೂಮ್ ಅನ್ನೋ ಹೆಸರು ಇಡಲಾಗಿತ್ತು. ಕ್ರಿಕೆಟ್ ಜಗತ್ತಿನಲ್ಲಿ ಆಫ್ರಿದಿ ಬೂಮ್ ಬೂಮ್ ಅಫ್ರಿದಿ ಎಂದೇ ಹೆಸರಾಗಿದ್ದಾರೆ. 

ಅಫ್ರಿದಿಗೆ ಬೂಮ್ ಬೂಮ್ ಹೆಸರಿಟ್ಟಿದ್ದು ಯಾರು ಅನ್ನೋದು ಇದೀಗ ಬಹಿರಂಗವಾಗಿದೆ. ಅಫ್ರಿದಿ ಈ ಡಿಫ್ರೆಂಟ್ ಹೆಸರು ಇಟ್ಟದ್ದು, ಟೀಂ ಇಂಡಿಯಾದ ಸದ್ಯದ ಕೋಚ್, ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ. 

 

Ravi Shastri

— Shahid Afridi (@SAfridiOfficial)

 

ಅಭಿಮಾನಿಯೊರ್ವ ಕೇಳಿದ ಪ್ರಶ್ನೆಗೆ ಆಫ್ರಿದಿ ಉತ್ತರಿಸೋ ಮೂಲಕ ಹೆಸರಿನ ರಹಸ್ಯ ಬಹಿರಂಗವಾಗಿದೆ. ಶಾಹಿದ್ ಆಫ್ರಿದಿ ಬಳಿ, ಬೂಮ್ ಬೂಮ್ ಹೆಸರಿಟ್ಟಿದ್ದು ಯಾರು ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಅಫ್ರಿದಿ ರವಿ ಶಾಸ್ತಿ ಎಂದು ಉತ್ತರಿಸಿದ್ದಾರೆ.

click me!