
ಬೆಂಗಳೂರು[ಆ.27]: ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್ ಸರ್ ಡೊನಾಲ್ಡ್ ಜಾರ್ಜ್[ದ ಡಾನ್] ಬ್ರಾಡ್ಮನ್ ಅವರ 110ನೇ ಜನ್ಮದಿನವಿದು. ಈ ಸಂದರ್ಭದಲ್ಲಿ ಗೂಗಲ್ ಡೂಡಲ್’ನಲ್ಲಿ ಬ್ರಾಡ್ಮನ್ ಅವರು ಬ್ಯಾಟಿಂಗ್ ಸ್ಟ್ರೋಕ್ ಅನಿಮೇಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಆಗಸ್ಟ್ 27, 1908ರಲ್ಲಿ ಆಸ್ಟ್ರೇಲಿಯಾದ ಕೋಟಾಮುಂದ್ರಾದಲ್ಲಿ ಜನಿಸಿದ ಬ್ರಾಡ್ಮನ್ ಕ್ರಿಕೆಟ್ ಜಗತ್ತಿನ ದಂತಕತೆಯಾಗಿ ಬೆಳದದ್ದೇ ಒಂದು ವಿಸ್ಮಯ. ತಮ್ಮ 1928ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ಪರ ಬ್ರಿಸ್ಬೇನ್’ನಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ಡಾನ್ ಬ್ರಾಡ್ಮನ್, 40 ವರ್ಷ ತುಂಬುವ ಮುನ್ನ 1948ರಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧವೇ ವಿದಾಯ ಹೇಳಿದರು.
54 ಟೆಸ್ಟ್ ಪಂದ್ಯಗಳಲ್ಲಿ 99.94ರ ಸರಾಸರಿಯಲ್ಲಿ 6996 ರನ್ ಚಚ್ಚಿದ್ದಾರೆ. ಒಟ್ಟು 80 ಇನ್ನಿಂಗ್ಸ್’ಗಳಲ್ಲಿ 29 ಶತಕ ಹಾಗೂ 13 ಅರ್ಧಶತಕಗಳು ಸೇರಿವೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 234 ಪಂದ್ಯಗಳನ್ನು ಆಡಿ 28067 ರನ್ ಬಾರಿಸಿದ್ದಾರೆ. ಇದರಲ್ಲಿ 117 ಶತಕಗಳು ಸೇರಿವೆ. ಅಸಂಖ್ಯಾತ ದಾಖಲೆಗಳ ಸರದಾರ ಬ್ರಾಡ್ಮನ್, ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್, 299 ರನ್ ಬಾರಿಸಿ ಅಜೇಯರಾಗುಳಿದ ಮೊದಲ ಹಾಗೂ ಏಕೈಕ ಬ್ಯಾಟ್ಸ್’ಮನ್, ನಂ.5ನೇ ಕ್ರಮಾಂಕದಲ್ಲಿ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಕೂಡಾ ಬ್ರಾಡ್ಮನ್ ಹೆಸರಿನಲ್ಲಿದೆ.
ನ್ಯುಮೋನಿಯಾ ರೋಗಕ್ಕೆ ತುತ್ತಾಗಿದ್ದ ಸರ್ ಡಾನ್ ಬ್ರಾಡ್ಮನ್ 25 ಫೆಬ್ರವರಿ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.