ಊಟಕ್ಕಾಗಿ 8614 ಕೀಮಿ ಪ್ರಯಾಣಿಸಿದ ಸೆರೆನಾ ದಂಪತಿ

Published : Jul 25, 2018, 01:04 PM IST
ಊಟಕ್ಕಾಗಿ 8614 ಕೀಮಿ ಪ್ರಯಾಣಿಸಿದ ಸೆರೆನಾ ದಂಪತಿ

ಸಾರಾಂಶ

ಊಟಕ್ಕಾಗಿ ಹೆಚ್ಚಂದರೆ 100, 200 ಕೀಮಿ ಪ್ರಯಾಣಿಸಿಬಹುದು. ಆದರೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್  ಬರೋಬ್ಬರಿ 614 ಕೀಮಿ ಪ್ರಯಾಣಿಸಿದ್ದಾರೆ. ಅಷ್ಟಕ್ಕೂ ಸೆರೆನಾ ದಂಪತಿ ಊಟ ಮಾಡಿದ್ದೆಲ್ಲಿ? ಇಲ್ಲಿದೆ ವಿವರ.

ವೆನಿಸ್(ಜು.25): 23 ಟೆನಿಸ್ ಗ್ರ್ಯಾಂಡ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್‌ರ ಸಣ್ಣ ಆಸೆಯನ್ನು ಪೂರೈಸಲು ಅವರ ಪತಿ ಅಲೆಕ್ಸಿಸ್ ಒಹಾನಿಯನ್ ದೊಡ್ಡ ಸಾಹಸ ಮಾಡಿದ್ದಾರೆ. ಕಳೆದ ವಾರ ಇದ್ದಕ್ಕಿದ್ದಂತೆ ಸೆರೆನಾ ಇಟಲಿಯನ್ ಆಹಾರ ಸೇವಿಸಬೇಕು ಎನಿಸುತ್ತಿದೆ ಎಂದರಂತೆ. ಕೂಡಲೇ ಅಲೆಕ್ಸಿಸ್
ಪತ್ನಿ ಸೆರೆನಾರನ್ನು ಕರೆದುಕೊಂಡು, ಇಟಲಿಯ ಜನಪ್ರಿಯ ನಗರ ವೆನಿಸ್‌ಗೆ ಬಂದಿದ್ದಾರೆ. 

ಅಲ್ಲಿ ದಂಪತಿ ಇಟಲಿಯನ್ ಖಾದ್ಯಗಳು, ವೈನ್ ಸವಿದು ಕೆಲ ದಿನಗಳು ಕಾಲ ಕಳೆದು ಅಮೆರಿಕಕ್ಕೆ ವಾಪಸಾಗಿದ್ದಾರೆ. ಈ ವಿಷಯವನ್ನು ಅಲೆಕ್ಸಿಸ್ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಪತ್ನಿಯ ಆಸೆ ಪೂರೈಸಿದ ಪತಿ ಅಲೆಕ್ಸಿಸ್‌ರನ್ನು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಕೊಂಡಾಡಿದ್ದಾರೆ. 

 

 

ವೆನಿಸ್ ನಗರದಲ್ಲಿ ಸೆರೆನಾ ಸಂತಸದಿಂದ ಕಾಲ ಕಲೆದಿದ್ದಾರೆ. ಕೆಲ ಹೊತ್ತು ವೆನಿಸ್ ನಗರದಲ್ಲಿ ನಡೆದಾಡಿದರು. ಈ ಸಂದರ್ಭವನ್ನ ಸೆರೆ ಹಿಡಿದ ಪತಿ ಅಲೆಕ್ಸಿಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

 

 

ಇತ್ತ  ಸರೆನಾ ಕೂಡ ತಾವು ಉಳಿದಕೊಂಡ ಹೊಟೆಲ್ ರೂಂ ವೀಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಕುಟುಂಬದ ಜೊತೆಗೆ ಕಾಲ ಕಳೆದ ಸ್ಮರಣೀಯ ಘಳಿಗೆಯನ್ನ ಸಂತಸದಿಂದ ಹಂಚಿಕೊಂಡಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿವೀಸ್ ಎದುರಿನ ಸೋಲಿನ ಬೆನ್ನಲ್ಲೇ ರೋಹಿತ್ ಮಾತ್ರವಲ್ಲ ಕೊಹ್ಲಿಗೂ ಬಿಗ್ ಶಾಕ್ ನೀಡಲು ರೆಡಿಯಾದ ಬಿಸಿಸಿಐ!
ನಿಮಗೇನು ಹುಚ್ಚು ಹಿಡಿದಿದೆಯಾ? Virat Kohli ಹೀಗಂದಿದ್ದು ಯಾರಿಗೆ? ವಿಡಿಯೋ ವೈರಲ್