
ಲಾಸ್ ಏಂಜಲೀಸ್ (ಅ.17): ಅಮೆರಿಕದ ಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್, ಇದೇ ತಿಂಗಳ 23ರಿಂದ ಸಿಂಗಾಪುರದಲ್ಲಿ ಆರಂಭಗೊಳ್ಳಲಿರುವ ಡಬ್ಲೂಟಿಎ ಫೈನಲ್ಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.
ಭುಜದ ನೋವಿನಿಂದ ಬಳಲುತ್ತಿರುವುದರಿಂದಾಗಿ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ಡಬ್ಲ್ಯೂಟಿಎ ತಿಳಿಸಿದೆ.
ಏತನ್ಮಧ್ಯೆ, ಟ್ವೀಟರ್‌ನ ಮೂಲಕ ತಾವು ಟೂರ್ನಿಯಿಂದ ಹಿಂದೆ ಸರಿದಿರುವುದನ್ನು ಖಾತ್ರಿಪಡಿಸಿರುವ ಸೆರೆನಾ, ‘ವೈದ್ಯರ ಸಲಹೆಯ ಮೇರೆಗೆ ತಾವು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಪ್ರತಿಯೊಂದು ದಿನವನ್ನೂ ಬೇಗನೇ ಚೇತರಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ಕಳೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಕೇವಲ ಒಂದು ಗ್ರ್ಯಾನ್'ಸ್ಲಾಮ್(ವಿಂಬಲ್ಡನ್) ಗೆದ್ದಿರುವ ಸೆರೆನಾ ಸ್ಟೆಫಿಗ್ರಾಪ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಉಳಿದೆರಡು ಗ್ರ್ಯಾನ್'ಸ್ಲಾಮ್'ನಲ್ಲಿ ಫೈನಲ್ ತಲುಪಿದರೂ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಅಮೆರಿಕಾದ ಆಟಗಾರ್ತಿ ವಿಫಲರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.