ಹೆಣ್ಣಾಗಿ ಹುಟ್ಟಿದ್ದಕ್ಕೆ ಸಮಸ್ಯೆ: ಸೆರೆನಾ

By Suvarna Web DeskFirst Published Dec 28, 2016, 4:54 PM IST
Highlights

‘‘ಹೆಣ್ಣಾಗಿ ಹುಟ್ಟಿದರೆ, ಅದರಲ್ಲೂ ಕಪ್ಪು ವರ್ಣೀಯಳಾಗಿದ್ದರೆ ನಿಮಗೆ ಸಮಸ್ಯೆಗಳು ಸಾಗರೋಪಾದಿಯಲ್ಲಿ ಮುತ್ತಿಕೊಳ್ಳುತ್ತವೆ. 22 ಗ್ರ್ಯಾಂಡ್ ಸ್ಲಾಂಗಳನ್ನು ನಾನು ಗಂಡಾಗಿ ಗೆದ್ದಿದ್ದರೆ ಇಷ್ಟರಲ್ಲಿ ನಾನೊಬ್ಬ ಅಗ್ರಮಾನ್ಯ ಆಟಗಾರ ಎಂದು ಬಣ್ಣಿಸಲ್ಪಡುತ್ತಿದ್ದೆ’’

- ಸೆರೆನಾ ವಿಲಿಯಮ್ಸ್

ವಾಷಿಂಗ್ಟನ್(ಡಿ.28): ತಾವು ಹೆಣ್ಣಾಗಿ ಹುಟ್ಟಿದ ಕಾರಣದಿಂದಲೇ ತಮ್ಮ ಪ್ರತಿಭೆಗೆ ತಕ್ಕ ಗೌರವ ಸಿಗುತ್ತಿಲ್ಲವೆಂದು ಆಗಾಗ ಅಲವತ್ತುಕೊಳ್ಳುವ ವಿಶ್ವ ಟೆನಿಸ್‌'ನ ಮಾಜಿ ನಂಬರ್‌'ಒನ್ ತಾರೆ, ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 23 ಗ್ರ್ಯಾಂಡ್ ಸ್ಲಾಂ ಟೆನಿಸ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆಯ ಹೊಸ್ತಿಲಲ್ಲಿ ನಿಂತಿದ್ದರೂ ತಮ್ಮನ್ನು ಅಗ್ರಮಾನ್ಯ ಟೆನಿಸ್ ಆಟಗಾರ್ತಿಯೆಂದು ಪರಿಗಣಿಸುತ್ತಿಲ್ಲ ಎಂದಿರುವ ಅವರು, ‘‘ಹೆಣ್ಣಾಗಿ ಹುಟ್ಟಿದರೆ, ಅದರಲ್ಲೂ ಕಪ್ಪು ವರ್ಣೀಯಳಾಗಿದ್ದರೆ ನಿಮಗೆ ಸಮಸ್ಯೆಗಳು ಸಾಗರೋಪಾದಿಯಲ್ಲಿ ಮುತ್ತಿಕೊಳ್ಳುತ್ತವೆ. 22 ಗ್ರ್ಯಾಂಡ್ ಸ್ಲಾಂಗಳನ್ನು ನಾನು ಗಂಡಾಗಿ ಗೆದ್ದಿದ್ದರೆ ಇಷ್ಟರಲ್ಲಿ ನಾನೊಬ್ಬ ಅಗ್ರಮಾನ್ಯ ಆಟಗಾರ ಎಂದು ಬಣ್ಣಿಸಲ್ಪಡುತ್ತಿದ್ದೆ’’ ಎಂದಿದ್ದಾರೆ.

click me!