ಅಬುದಾಬಿ ಟಿ20 ಲೀಗ್ ವೇಳಾಪಟ್ಟಿ ಪ್ರಕಟ-ಕಣಕ್ಕಿಳಿಯಲಿದ್ದಾರೆ ಗೇಲ್!

Published : Sep 26, 2018, 10:06 PM IST
ಅಬುದಾಬಿ ಟಿ20  ಲೀಗ್ ವೇಳಾಪಟ್ಟಿ ಪ್ರಕಟ-ಕಣಕ್ಕಿಳಿಯಲಿದ್ದಾರೆ ಗೇಲ್!

ಸಾರಾಂಶ

ಕ್ರಿಸ್ ಗೇಲ್, ಯಾಸಿರ್ ಶಾ, ಆಲ್ಬೆ ಮಾರ್ಕೆಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೊಳಗೊಂಡ ಅಬು ದಾಬಿ ಟಿ20 ಲೀಗ್ ಟೂರ್ನಿ ಆರಂಭಗೊಳ್ಳುತ್ತಿದೆ. ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ

ಅಬು ದಾಬಿ(ಸೆ.26): ಬಹುನಿರೀಕ್ಷಿತ ಅಬು ದಾಬಿ ಟಿ20 ಲೀಗ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದೆ. ಇದರ ಬೆನ್ನಲ್ಲೇ ಅಬು ದಾಬಿ ಟಿ20 ಆಯೋಜಕರು ಟೂರ್ನಿಯ ವೇಳಾ ಪಟ್ಟಿ ಪ್ರಕಟಿಸಿದ್ದಾರೆ. ಅಕ್ಟೋಬರ್ 4 ರಿಂದ 6 ವರೆಗೆ ಚುಟುಕು ಕ್ರಿಕೆಟ್ ಟೂರ್ನಿ ನಡೆಯಲಿದೆ.

ಅಬು ದಾಬಿ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಟೂರ್ನಿಯ ಹೊಬಾರ್ಟ್ ಹರಿಕೇನ್, ಇಂಗ್ಲೆಂಡ್‌ನ ಯಾರ್ಕ್‌ಶೈರ್ ವಿಕಿಂಗ್ಸ್, ಸೌತ್ಆಫ್ರಿಕಾದ ಮಲ್ಟಿಪ್ಲೈ ಟೈಟಾನ್ಸ್, ಆಫ್ಘಾನಿಸ್ತಾನದ ಬೂಸ್ಟ್ ಡಿಫೆಂಡರ್ಸ್, ನ್ಯೂಜಿಲೆಂಡ್‌ನ ಆಕ್ಲೆಂಡ್ ಎಸ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಲಾಹೋರ್ ಖಲಾಂಡರ್ಸ್ ತಂಡ ಪಾಲ್ಗೊಳ್ಳಲಿದೆ.

ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಸ್ಟಾರ್‌ಗಳಾದ ಕ್ರಿಸ್ ಗೇಲ್, ಆಲ್ಬೆ ಮಾರ್ಕೆಲ್, ಯಾಸಿರ್ ಶಾ, ಟೈಮುಲ್ ಮಿಲ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಭಾಗವಹಿಸಲಿದ್ದಾರೆ. 

ಇಲ್ಲಿದೆ ವೇಳಾಪಟ್ಟಿ

ಅಕ್ಟೋಬರ್ 4
ಆಕ್ಲಲೆಂಡ್ ಎಸಸ್ vs ಬೂಸ್ಟ್ ಡಿಫೆಂಡರ್ಸ್
ಯಾರ್ಕ್‌ಶೈರ್ ವಿಕಿಂಗ್ಸ್ vs ಲಾಹೋರ್ ಖಲಾಂಡರ್ಸ್

ಅಕ್ಟೋಬರ್ 5
ಹೊಬಾರ್ಟ್ ಹರಿಕೇನ್ಸ್ vs ಲಾಹೋರ್ ಖಲಾಂಡರ್ಸ್
ಮಲ್ಟಿಪ್ಲೈ ಟೈಟಾನ್ಸ್ vs ಬೂಸ್ ಡಿಫೆಂಡರ್ಸ್

ಅಕ್ಟೋಬರ್ 6
ಯಾರ್ಕ್‌ಶೈರ್ ವಿಕಿಂಗ್ಸ್ vs ಹೋಬಾರ್ಟ್ ಹರಿಕೇನ್ಸ್
ಮಲ್ಟಿಪ್ಲೈ ಟೈಟಾನ್ಸ್ vs ಆಕ್ಲೆಂಡ್ ಎಸಸ್
ಫೈನಲ್(TBD vs TBD)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!