ರನ್ ಹೊಳೆ ಹರಿಸಿದ ಡೇರ್ ಡೆವಿಲ್ಸ್

By Suvarna Web DeskFirst Published Apr 11, 2017, 4:47 PM IST
Highlights

ಕೇವಲ 63 ಎಸೆತಗಳನ್ನೆದುರಿಸಿದ ಕೇರಳದ ಯುವ ಪ್ರತಿಭೆ 8 ಬೌಂಡರಿ ಹಾಗೂ 5 ಸಿಕ್ಸರ್'ಗಳ ನೆರವಿನಿಂದ 102 ರನ್ ಕಲೆಹಾಕಿದರು.

ಪುಣೆ(ಏ.11): ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಾರಿಸಿದ ಚೊಚ್ಚಲ ಶತಕ ಹಾಗೂ ಕೊನೆಯಲ್ಲಿ ಕ್ರಿಸ್ ಮೋರಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ 205ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಾಯಕ ಅಜಿಂಕ್ಯಾ ರಹಾನೆ ನಿರ್ಧಾರವನ್ನು ತಲೆಕೆಳಗಾಗುವಂತೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ಡೇರ್'ಡೆವಿಲ್ಸ್ ತಂಡ ಪುಣೆಗೆ ಗೆಲ್ಲಲು ಬೃಹತ್ ಗುರಿಯನ್ನೇ ನೀಡಿದೆ. ಎರಡನೇ ಓವರ್'ನ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿದರೂ ಧೃತಿಗೆಡದೇ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ ಐಪಿಎಲ್'ನಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಕೇವಲ 63 ಎಸೆತಗಳನ್ನೆದುರಿಸಿದ ಕೇರಳದ ಯುವ ಪ್ರತಿಭೆ 8 ಬೌಂಡರಿ ಹಾಗೂ 5 ಸಿಕ್ಸರ್'ಗಳ ನೆರವಿನಿಂದ 102 ರನ್ ಕಲೆಹಾಕಿದರು.

ಇನ್ನು ಸಂಜು ಸ್ಯಾಮ್ಸನ್ ಬಳಿಕ ಬ್ಯಾಟಿಂಗ್'ಗಿಳಿದ ಕ್ರಿಸ್ ಮೋರಿಸ್ ಎದುರಾಳಿ ಬೌಲರ್'ಗಳನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಬ್ಯಾಟ್ ಬೀಸಿದರು. ಕೇವಲ 9 ಎಸೆತಗಳನ್ನೆದುರಿಸಿದ ಮೋರಿಸ್ 38ರನ್ ಚಚ್ಚಿದರು. ಅದರಲ್ಲಿ ನಾಲ್ಕು ಬೌಂಡರಿ ಮೂರು ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು.

ಪುಣೆ ಪರ ದೀಪಕ್ ಚಾಹರ್, ಇಮ್ರಾನ್ ತಾಹಿರ್ ಮತ್ತು ಆ್ಯಡಂ ಜಂಪ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಡೆಲ್ಲಿ ಡೇರ್'ಡೆವಿಲ್ಸ್: 205/4

ಸಂಜು ಸ್ಯಾಮ್ಸನ್: 102

ಕ್ರಿಸ್ ಮೋರಿಸ್ : 38

ಇಮ್ರಾನ್ ತಾಹಿರ್: 24/1

click me!