Cricket: ಮಾಜಿ ಕ್ರಿಕೆಟಿಗನ ಬದುಕು ಬದಲಾಯಿಸಿದ ಜಮೀನು; ₹22.40 ಕೋಟಿಗೆ ಡೀಲ್ ಕುದುರಿಸಿದ ಮಂಗಳೂರಿನ ಮೊಮ್ಮಗ!

Published : Oct 30, 2026, 07:48 PM IST
Vijay Manjrekar Sanjay Manjrekar

ಸಾರಾಂಶ

ಮಾಜಿ ಕ್ರಿಕೆಟಿಗ ತಮ್ಮ 8,050 ಚದರ ಮೀಟರ್ ವಿಸ್ತೀರ್ಣದ ಕೃಷಿಯೇತರ ಜಮೀನನ್ನು ಕಾರ್ಟ್ರೇಡ್ ಟೆಕ್ ಸಂಸ್ಥೆಗೆ ₹22.40 ಕೋಟಿಗೆ ಮಾರಾಟ ಮಾಡಿದ್ದಾರೆ. ಈ ನಿಟ್ಟಿನಲ್ಲಿ 22 ಕೋಟಿ ಡೀಲ್‌ ಕುದುರಿಸಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಆಲಿಬಾಗ್‌ನಲ್ಲಿರುವ ತಮ್ಮ ಬೃಹತ್ ಜಮೀನನ್ನು ಬರೋಬ್ಬರಿ ₹22.40 ಕೋಟಿಗೆ ಮಾರಾಟ ಮಾಡಿದ್ದಾರೆ. ಪ್ರಮುಖ ಡಿಜಿಟಲ್ ಆಟೋಮೋಟಿವ್ ಪ್ಲಾಟ್‌ಫಾರ್ಮ್ ಆದ ಕಾರ್ಟ್ರೇಡ್ ಟೆಕ್ ಲಿಮಿಟೆಡ್ ಈ ಆಸ್ತಿಯನ್ನು ಖರೀದಿಸಿದೆ. ಒಟ್ಟು 8,050 ಚದರ ಮೀಟರ್ (80.50 ಏಕರೆಸ್) ವಿಸ್ತೀರ್ಣದ ಕೃಷಿಯೇತರ ಜಮೀನು ಇದಾಗಿದ್ದು, ಇದರಲ್ಲಿ ಎರಡು ವಸತಿ ಕಟ್ಟಡಗಳೂ ಸೇರಿವೆ.

ಎಲ್ಲಿದೆ ಆಸ್ತಿ?

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಆಲಿಬಾಗ್ ತಾಲೂಕಿನ ಧೋಕಾವಾಡೆ ಗ್ರಾಮದಲ್ಲಿದೆ. ನೋಂದಣಿ ಮತ್ತು ಮುದ್ರೆ ಶುಲ್ಕ: ಈ ಹೈ-ಪ್ರೊಫೈಲ್ ವ್ಯವಹಾರಕ್ಕಾಗಿ ₹1.344 ಕೋಟಿ ಸ್ಟಾಂಪ್ ಡ್ಯೂಟಿ (ಮುದ್ರೆ ಶುಲ್ಕ) ಪಾವತಿಸಲಾಗಿದ್ದು, ಅಕ್ಟೋಬರ್ 27, 2026 ರಂದು ಅಧಿಕೃತವಾಗಿ ನೋಂದಣಿಯಾಗಿದೆ.

ಸೆಲೆಬ್ರಿಟಿಗಳ ನೆಚ್ಚಿನ ತಾಣ!

ಮುಂಬೈಗೆ ಹತ್ತಿರವಿರುವ ಆಲಿಬಾಗ್ ಪ್ರಸ್ತುತ ಬಾಲಿವುಡ್ ತಾರೆಯರು, ಉದ್ಯಮಿಗಳು ಮತ್ತು ಕ್ರಿಕೆಟಿಗರು ಐಷಾರಾಮಿ ರಜಾದಿನದ ಮನೆಗಳನ್ನು ಹೊಂದಲು ಅತ್ಯಂತ ಜನಪ್ರಿಯ ಸ್ಥಳವಾಗಿ ಮಾರ್ಪಟ್ಟಿದೆ. ಡಿಜಿಟಲ್ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಾರ್ಟ್ರೇಡ್ ಟೆಕ್ ಸಂಸ್ಥೆಯು ಆಲಿಬಾಗ್‌ನಲ್ಲಿ ಇಷ್ಟೊಂದು ದೊಡ್ಡ ಜಮೀನು ಖರೀದಿಸಿರುವುದು, ಕಂಪನಿಯು ವಾಣಿಜ್ಯ ಅಥವಾ ಕಾರ್ಪೊರೇಟ್ ಅಭಿವೃದ್ಧಿ ಉದ್ದೇಶ ಹೊಂದಿರಬಹುದು ಎಂಬ ಕುತೂಹಲ ಮೂಡಿಸಿದೆ.

ಸ್ಥಿರ ಆಸ್ತಿ ಮೌಲ್ಯ ಹೆಚ್ಚಳ!

ಮುಂಬೈ ಮತ್ತು ಆಲಿಬಾಗ್ ನಡುವಿನ ರೋ-ರೋ ಬೋಟ್ ಸೇವೆಗಳು ಮತ್ತು ಉತ್ತಮ ರಸ್ತೆ ಸಂಪರ್ಕದ ಕಾರಣದಿಂದಾಗಿ ಈ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ದರಗಳು ಗಗನಕ್ಕೇರಿವೆ. ಮಾರಾಟವಾಗಿರುವ ಜಮೀನು ಈಗಾಗಲೇ 'ಕೃಷಿಯೇತರ' ವಲಯಕ್ಕೆ ಪರಿವರ್ತನೆಯಾಗಿರುವುದರಿಂದ, ಖರೀದಿದಾರರಾದ ಕಾರ್ಟ್ರೇಡ್ ಟೆಕ್ ಸಂಸ್ಥೆಗೆ ತಕ್ಷಣವೇ ಹೊಸ ನಿರ್ಮಾಣ ಅಥವಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸುಲಭವಾಗಲಿದೆ. ಸದ್ಯ ಕ್ರಿಕೆಟ್ ಕಾಮೆಂಟೇಟರ್ ಆಗಿ ಬ್ಯುಸಿಯಾಗಿರುವ ಸಂಜಯ್ ಮಂಜ್ರೇಕರ್ ಅವರ ಈ ಹೈ-ಪ್ರೊಫೈಲ್ ವ್ಯವಹಾರವು, ಮುಂಬೈ ಸುತ್ತಮುತ್ತಲಿನ ಸೆಲೆಬ್ರಿಟಿಗಳ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಮತ್ತೆ ಮುಂಬೈ ನಾಯಕನಾಗುತ್ತಾರಾ? ಹಿಟ್‌ಮ್ಯಾನ್ ನಾಯಕತ್ವದಲ್ಲಿ ಆಡಲು ಪಾಂಡ್ಯ ಸಮ್ಮತಿ..! 6ನೇ ಕಪ್‌ ಗೆಲ್ಲಲು ಮಾಸ್ಟರ್ ಪ್ಲಾನ್
ಮುಗಿತಾ ಭುವಿ ಜಮಾನಾ? 4 ವರ್ಷದ ಬಳಿಕ ಕಮ್‌ಬ್ಯಾಕ್; ಕೇವಲ 3 ಪಂದ್ಯಕ್ಕೆ ಮೂಲೆಗುಂಪು! ಆ 12 ಬಾಲ್‌ಗಳ ಮ್ಯಾಜಿಕ್ ಏನು?