
ನವದೆಹಲಿ(ಡಿ.24): ವಿರಾಟ್ ಕೊಹ್ಲಿ, ಸಾನಿಯಾ ಮಿರ್ಜಾ ಸೇರಿದಂತೆ ಅಗ್ರ ಕ್ರೀಡಾಪಟುಗಳು, ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ಸಚಿನ್ ತೆಂಡೂಲ್ಕರ್ ಶುಕ್ರವಾರ ಫೇಸ್‌ಬುಕ್'ನಲ್ಲಿ ಮಾಡಿದ ಭಾಷಣವನ್ನು ಬೆಂಬಲಿಸಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭೆ ಸದಸ್ಯರಾಗಿರುವ ಸಚಿನ್'ಗೆ ಗುರುವಾರ ರಾಜ್ಯಸಭೆ ಕಲಾಪದ ವೇಳೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಸಚಿನ್ ಫೇಸ್'ಬುಕ್ ಲೈವ್ ವಿಡಿಯೋ ಮೂಲಕ ದೇಶದಲ್ಲಿ ಕ್ರೀಡಾ ಅಭಿವೃದ್ಧಿಯ ಅಗತ್ಯ ಕುರಿತು ಭಾಷಣ ಮಾಡಿದ್ದರು.
ಫೇಸ್'ಬುಕ್ ಲೈವ್'ನಲ್ಲಿ ದೇಶದ ಕ್ರೀಡಾಪಟುಗಳು ಎದುರಿಸುವ ಸವಾಲುಗಳ ಬಗ್ಗೆ, ಹಣಕಾಸಿನ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದ್ದರು. ಸಾಕಷ್ಟು ರಾಷ್ಟ್ರಮಟ್ಟದ, ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಥ್ಲೀಟ್'ಗಳಿಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ ಇದನ್ನೆಲ್ಲ ಗಮನಸಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾತನಾಡಿದ್ದರು.
ಸಚಿನ್ ಮಾತಿಗೆ ಜಹೀರ್ ಖಾನ್, ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಸಾನಿಯಾ ಮಿರ್ಜಾ, ವಿರಾಟ್ ಕೊಹ್ಲಿ ಮುಂತಾದರವರು ಬೆಂಬಲ ಸೂಚಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.