ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ-ಸಾನಿಯಾ ತಿರುಗೇಟು

Published : Aug 14, 2018, 07:18 PM ISTUpdated : Sep 09, 2018, 09:25 PM IST
ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ-ಸಾನಿಯಾ ತಿರುಗೇಟು

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ವಿನಿಮಯ ಮಾಡೋದು ಸಾಮಾನ್ಯ. ಆದರೆ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ ಟ್ವಿಟರಿಗನಿಗೆ ಮಿರ್ಜಾ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಸ್ವಾತಂತ್ರ್ಯಕ್ಕೆ ಶುಭಕೋರಿದ್ದಕ್ಕೆ ಸಾನಿಯಾ ಕೆಂಡಾಮಂಡಲಾಗಿದ್ದೇಕೆ?

ಹೈದರಾಬಾದ್(ಆ.14): ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮದುವೆಯಾದ ಮೇಲೆ ಹಲವು ವಿವಾದಗಳನ್ನ ಎದುರಿಸಬೇಕಾಯಿತು. ಇದೀದ ಸಾನಿಯಾ ಮಿರ್ಜಾಗೆ ಆಗಸ್ಟ್ 14 ರಂದೇ ಸ್ವಾತಂತ್ರ್ಯ ದಿನಾಚರಣೆಗ ಶುಭಕೋರಿದ ಟ್ವಿಟರಿಗನಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಟ್ವಿಟರಿಗನೊಬ್ಬ ಸಾನಿಯಾಗೆ ಟ್ವೀಟ್ ಮೂಲಕ ಸಾನಿಯಾ  ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಇಂದೇ(ಆ.14) ಅಲ್ವಾ? ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಎಂದಿದ್ದಾರೆ.  ಆಗಸ್ಟ್ 14 ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ ಟ್ವಿಟರಿಗೆ, ಸಾನಿಯಾ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಹೇಳಿದ್ದಾನೆ. 

ಟ್ವಿಟರಿಗನ ಶುಭಾಶಯಕ್ಕೆ ಸಾನಿಯಾ ತಿರುಗೇಟು ನೀಡಿದ್ದಾರೆ. ನನ್ನ ಹಾಗೂ ನನ್ನ ದೇಶದ ಸ್ವಾತಂತ್ರ್ಯ ದಿನಾಚರಣೆ ನಾಳೆ(ಆ.15).  ನನ್ನ ಪತಿ ಹಾಗೂ ಪತಿಯ ದೇಶದ ಸ್ವಾತಂತ್ರ್ಯ ದಿನಾಚರಣೆ ಇಂದು. ನಿಮ್ಮ ಗೊಂದಲ ಈಗ ಸರಿಯಾಗಿದೆ ಅಂದುಕೊಂಡಿದ್ದೇನೆ.  ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಯಾವಾಗ ಎಂದು ಸಾನಿಯಾ ಪ್ರಶ್ನಿಸಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತಕ್ಕೆ 6ನೇ ಅ19 ವಿಶ್ವಕಪ್ ಟ್ರೋಫಿ, 1988ರಿಂದ 2026ರ ವರೆಗೆ ಕಪ್ ಗೆದ್ದ ತಂಡಗಳ ಫುಲ್ ಲಿಸ್ಟ್
ಒಂದೇ ಪಂದ್ಯದಲ್ಲಿ 5 ವಿಶ್ವದಾಖಲೆ, ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ ಯುವ ಆಟಗಾರ ವೈಭವ್