ತೆಲಂಗಾಣ ರಾಯಭಾರಿ: ಸಾನಿಯಾ ಮಿರ್ಜಾ ಬೇಡವೆಂದ ಬಿಜೆಪಿ ಮುಖಂಡ

By Web DeskFirst Published Feb 18, 2019, 2:22 PM IST
Highlights

ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಯಾವುದೇ ವ್ಯವಹಾರ ಭಾರತಕ್ಕೆ ಬೇಡ. ಹೀಗಾಗಿ ಪಾಕಿಸ್ತಾನ ಸೊಸೆಯಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾಳನ್ನ ತೆಲಂಗಾಣ ರಾಯಭಾರಿ ಸ್ಥಾನದಿಂದ ತೆಗೆದುಹಾಕಿ ಎಂದು ಬಿಜೆಪಿ ಮುಖಂಡ ಆಗ್ರಹಿಸಿದ್ದಾರೆ.
 

ಹೈದರಾಬಾದ್(ಫೆ.18): ತೆಲಂಗಾಣ ರಾಜ್ಯದ ರಾಯಭಾರಿಯಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಿತ್ತೆಸೆಯಿರಿ ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಆಗ್ರಹಿಸಿದ್ದಾರೆ. ಪುಲ್ವಾಮ ದಾಳಿ ಬಳಿಕ ಶಾಸಕ ರಾಜಾ ಸಿಂಗ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಸಾನಿಯಾ ಮಿರ್ಜಾ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಮದುವೆಯಾದ ಬಳಿಕ ಪಾಕಿಸ್ತಾನ ಸೊಸೆಯಾಗಿದ್ದಾರೆ. ಹೀಗಾಗಿ ತೆಲಂಗಾಣ ರಾಯಭಾರಿಯಾಗಿ ಮುಂದುವರಿಸುವುದು ಸೂಕ್ತವಲ್ಲ ಎಂದಿದ್ದಾರೆ.

ಇದನ್ನೂ ಓದಿ: ಟ್ರೋಲಿಗರಿಗೆ ಸಾನಿಯಾ ತಿರುಗೇಟು- ಪಾಕ್ ಪ್ರಚೋದಿತ ದಾಳಿ ಕುರಿತು ಒಂದು ಮಾತಿಲ್ಲ!

ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಭಾರತದ ಪರ ಆಡುತ್ತಿದ್ದರೂ, ಪಾಕಿಸ್ತಾನಿ ಸೊಸೆಯಾಗಿದ್ದಾರೆ. ಹೀಗಾಗಿ ಪಾಕ್ ಜೊತೆಗಿನ ಯಾವುದೇ ವ್ಯವಹಾರ ಭಾರತಕ್ಕೆ ಬೇಡ. ಹೀಗಾಗಿ ರಾಯಭಾರಿ  ಸ್ಥಾನದಿಂದ ಸಾನಿಯಾ ತೆಗೆದುಹಾಕಿ ಎಂದಿದ್ದಾರೆ. 

ಇದನ್ನೂ ಓದಿ: ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!

ಪುಲ್ವಾಮ ಭಯೋತ್ಪಾದಕ ದಾಳಿಯಿಂದ ಭಾರತದ 40 ಹೆಚ್ಚೂ CRPF ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ  ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ದಾಳಿ ಬಳಿಕ ಪಾಕಿಸ್ತಾನಕ್ಕೆ ಎಲ್ಲಾ ರೀತಿಯ ಹೊಡೆತ ನೀಡಲು ಭಾರತ ಮುಂದಾಗಿದೆ.

click me!