ಕ್ವಾರ್ಟರ್'ನಲ್ಲಿ ಮುಗ್ಗರಿಸಿದ ಸಾನಿಯಾ ಜೋಡಿ

Published : Mar 15, 2017, 06:33 AM ISTUpdated : Apr 11, 2018, 01:03 PM IST
ಕ್ವಾರ್ಟರ್'ನಲ್ಲಿ ಮುಗ್ಗರಿಸಿದ ಸಾನಿಯಾ ಜೋಡಿ

ಸಾರಾಂಶ

ಎಂಟರಘಟ್ಟದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 4-6, 4-6ಸೆಟ್‌'ಗಳಿಂದ ಸ್ವಿಟ್ಜರ್‌'ಲೆಂಡಿನ ಮಾರ್ಟಿನಾ ಹಿಂಗಿಸ್ ಮತ್ತು ತೈವಾನ್‌'ನ ಯಂಗ್ ಜನ್ ಚನ್ ಜೋಡಿ ಎದುರು ಸೋಲುಂಡಿತು.

ಇಂಡಿಯನ್ ವೆಲ್ಸ್(ಮಾ.15): ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೈಕೋವಾ ಜೋಡಿ, ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ.

ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 4-6, 4-6ಸೆಟ್‌'ಗಳಿಂದ ಸ್ವಿಟ್ಜರ್‌'ಲೆಂಡಿನ ಮಾರ್ಟಿನಾ ಹಿಂಗಿಸ್ ಮತ್ತು ತೈವಾನ್‌'ನ ಯಂಗ್ ಜನ್ ಚನ್ ಜೋಡಿ ಎದುರು ಸೋಲುಂಡಿತು.

ಸ್ವಿಸ್ ಮತ್ತು ತೈವಾನ್ ಜೋಡಿ ಪಂದ್ಯದ ಆರಂಭದಿಂದಲೂ ಇಂಡೋ-ಜೆಕ್ ಆಟಗಾರ್ತಿಯರ ಎದುರು ಪ್ರಭಾವಿ ಆಟವಾಡುವ ಮೂಲಕ ಎರಡು ಸೆಟ್‌'ಗಳ ಆಟದಲ್ಲಿ ತಲಾ 2 ಪಾಯಿಂಟ್ಸ್ ಮುನ್ನಡೆ ಪಡೆದು ಪಂದ್ಯ ಜಯಿಸಿತು. ಇದರೊಂದಿಗೆ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಈ ಮೊದಲು ಪೇಸ್-ಪೋಟ್ರೋ ಜೋಡಿ ಟೂರ್ನಿಯಿಂದ ಹೊರಬಿದ್ದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?
ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!