ಸಂದೀಪ್ ಶರ್ಮಾ ದಾಳಿಗೆ ತತ್ತರಿಸಿದ ಡೆಲ್ಲಿ ಡೇರ್'ಡೆವಿಲ್ಸ್

Published : Apr 30, 2017, 08:19 AM ISTUpdated : Apr 11, 2018, 01:04 PM IST
ಸಂದೀಪ್ ಶರ್ಮಾ ದಾಳಿಗೆ ತತ್ತರಿಸಿದ ಡೆಲ್ಲಿ ಡೇರ್'ಡೆವಿಲ್ಸ್

ಸಾರಾಂಶ

ಐಪಿಎಲ್ ಇತಿಹಾಸದಲ್ಲೇ ಕಿಂಗ್ಸ್ ಇಲೆವನ್ ಪಂಜಾಬ್ ಮೊತ್ತಮೊದಲ ಬಾರಿಗೆ 10 ವಿಕೆಟ್'ಗಳ ಜಯ ದಾಖಲಿಸಿದೆ.

ಮೊಹಾಲಿ(ಏ.30): ಸಂದೀಪ್ ಶರ್ಮಾ(20/4), ವರುಣ್ ಆ್ಯರೋನ್(3/2) ಮತ್ತು ಅಕ್ಷರ್ ಪಟೇಲ್ ಕರಾರುವಕ್ಕಾದ ದಾಳಿ ಹಾಗೂ ಆರಂಭಿಕ ಬ್ಯಾಟ್ಸ್'ಮನ್ ಮಾರ್ಟಿನ್ ಗುಪ್ಟಿಲ್ ಸ್ಪೋಟಕ ಬ್ಯಾಟಿಂಗ್ ನೆರವಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 10 ವಿಕೆಟ್'ಗಳ ಭರ್ಜರಿ ಜಯಭೇರಿ ಬಾರಿಸಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಡೇರ್'ಡೆವಿಲ್ಸ್ ತಂಡವು ಪಂಜಾಬ್ ಸಂಘಟಿತ ಬೌಲಿಂಗ್'ಗೆ ತತ್ತರಿಸಿ ಕೇವಲ 67ರನ್'ಗಳಿಗೆ ಸರ್ವಪತನ ಕಂಡಿತು.  ಈ ಮೂಲಕ ಡೆಲ್ಲಿ ಕಳಪೆ ಮೊತ್ತಕ್ಕೆ ಕುಸಿದು ಮುಖಭಂಗ ಅನುಭವಿಸಿತು.

ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ಮುನ್ನೆಡೆಸಿದ ಕನ್ನಡಿಗ ಕರುಣ್ ನಾಯರ್ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ವಿಫಲರಾದರು.

ಡೆಲ್ಲಿ ಡೇರ್'ಡೆವಿಲ್ಸ್ ನೀಡಿದ 67ರನ್'ಗಳ ಸಾಧಾರಣ ಮೊತ್ತವನ್ನು ಕಿಂಗ್ಸ್ ಇಲೆವನ್ ಪಂಜಾಬ್ ಪಡೆ ಕೇವಲ 7.5 ಓವರ್'ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ನಗೆ ಬೀರಿತು. ಪಂಜಾಬ್ ಪರ ಮಾರ್ಟಿನ್ ಗುಪ್ಟೀಲ್ ಅಜೇಯ 50ರನ್ ಬಾರಿಸಿದರೆ, ಹಾಶೀಂ ಆಮ್ಲಾ 16ರನ್'ಗಳಿಸಿ ಗುಪ್ಟಿಲ್'ಗೆ ತಕ್ಕ ಸಾಥ್ ನೀಡಿದರು. ಐಪಿಎಲ್ ಇತಿಹಾಸದಲ್ಲೇ ಕಿಂಗ್ಸ್ ಇಲೆವನ್ ಪಂಜಾಬ್ ಮೊತ್ತಮೊದಲ ಬಾರಿಗೆ 10 ವಿಕೆಟ್'ಗಳ ಜಯ ದಾಖಲಿಸಿದೆ.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶಪಡೆದ ಡೆಲ್ಲಿ ಡೇರ್'ಡೆವಿಲ್ಸ್ ತಂಡ ವೇಗಿ ಸಂದೀಪ್ ಶರ್ಮಾ ಬೌಲಿಂಗ್'ಗೆ ತರಗೆಲೆಗಳಂತೆ ತತ್ತರಿಸಿ ಹೋಯಿತು. ನಾಯಕ ಕರುಣ್ ನಾಯರ್(11), ಕೋರಿ ಆ್ಯಂಡರ್'ಸನ್(18) ಮತ್ತು ಕಗಿಸೋ ರಬಾಡ(11) ಹೊರತುಪಡಿಸಿ ಯಾವೊಬ್ಬ ಡೆಲ್ಲಿ ಆಟಗಾರನೂ ಎರಡಂಕಿ ಮೊತ್ತ ಮುಟ್ಟುವಲ್ಲಿ ಸಫಲರಾಗಲಿಲ್ಲ. ಪಂಜಾಬ್ ಪರ ಸಂಘಟಿತ ದಾಳಿ ನಡೆಸಿದ ಸಂದೀಪ್ ಶರ್ಮಾ 20 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರೆ, ವರುಣ್ ಆ್ಯರೋನ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್:

ಡೆಲ್ಲಿ ಡೇರ್'ಡೆವಿಲ್ಸ್: 67/10

ಕೋರಿ ಆ್ಯಂಡರ್'ಸನ್: 18

ಕರುಣ್ ನಾಯರ್ : 11

ಸಂದೀಪ್ ಶರ್ಮಾ: 20/4

ಕಿಂಗ್ಸ್ ಇಲೆವನ್ ಪಂಜಾಬ್: 68/0

ಮಾರ್ಟಿನ್ ಗುಪ್ಟೀಲ್ : 50*

ಹಾಶೀಂ ಆಮ್ಲಾ :16

ಪಂದ್ಯಪುರುಷೋತ್ತಮ: ಸಂದೀಪ್ ಶರ್ಮಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?