ಸೈನಾ-ಸಿಂಧು ದೇಶದ ಅಮೂಲ್ಯ ರತ್ನಗಳು

 |  First Published May 6, 2018, 12:30 PM IST

ಕಳೆದ ತಿಂಗಳಷ್ಟೇ ಮುಕ್ತಾಯವಾದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಅವರನ್ನು ಮಣಿಸಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದಿದ್ದರು. 

ನವದೆಹಲಿ(ಮೇ.06]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್, ಭಾರತ ಬ್ಯಾಡ್ಮಿಂಟನ್ ಲೋಕದ ಅಪೂರ್ವ ರತ್ನಗಳು ಎಂದು ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್ ಮುಖ್ಯ ಕೋಚ್ ಫುಲ್ಲೇಲ ಗೋಪಿಚಂದ್ ವರ್ಣಿಸಿದರು. 

ಅಕಾಡೆಮಿಯಲ್ಲಿ ನಿತ್ಯ ಸೋಲು-ಗೆಲುವು ಇದ್ದೇ ಇರುತ್ತವೆ. ಸೋಲು-ಗೆಲುವು ಎರಡೂ ಆಟಗಾರರಿಗೆ ಉತ್ತೇಜನ ನೀಡುತ್ತವೆ. ಗೆಲುವು ಸಾಧನೆಗೆ ಪ್ರೋತ್ಸಾಹಿಸಿದರೆ, ಸೋಲಿನಿಂದ ಗೆಲ್ಲಬೇಕೆಂಬ ಛಲ ಮೂಡುತ್ತದೆ. ಈ ಇಬ್ಬರೂ ಒಲಿಂಪಿಕ್‌ನಲ್ಲಿ ಚಿನ್ನ ಗೆಲ್ಲಬೇಕೆಂಬುದು ನನ್ನ ಕನಸಾಗಿದೆ ಎಂದು ಹೇಳಿದರು. ಸೈನಾ ಒಲಿಂಪಿಕ್‌ನಲ್ಲಿ ಕಂಚು ಗೆದ್ದರೆ, ಸಿಂಧು ರಿಯೊ ಒಲಿಂಪಿಕ್‌’ನಲ್ಲಿ ಬೆಳ್ಳಿ ಜಯಿಸಿದ್ದರು.

Tap to resize

Latest Videos

ಕಳೆದ ತಿಂಗಳಷ್ಟೇ ಮುಕ್ತಾಯವಾದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಅವರನ್ನು ಮಣಿಸಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದಿದ್ದರು. 

click me!