ನಿಷೇಧದ ಬಳಿಕ ವಾರ್ನರ್ ಏನು ಮಾಡ್ತಿದ್ದಾರೆ ಗೊತ್ತಾ..?

First Published May 6, 2018, 11:59 AM IST
Highlights

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್’ನ ವೇಳೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಸ್ಮಿತ್ ಹಾಗೂ ವಾರ್ನರ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ಹೇರಿದ್ದರೆ, ಬೆನ್’ಕ್ರಾಫ್ಟ್’ಗೆ 9 ತಿಂಗಳ ನಿಷೇಧ ಹೇರಿದೆ.

ಸಿಡ್ನಿ[ಮೇ.06]: ಚೆಂಡು ವಿರೂಪ ಪ್ರಕರಣದಿಂದಾಗಿ ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. 

ಈ ಪ್ರಕರಣದಿಂದಾಗಿ ಆರಂಭದಲ್ಲಿ ಬೇಸತ್ತಿದ್ದ ನಾನು ಅಭಿಮಾನಿಗಳ ಸಹಕಾರದಿಂದಾಗಿ ಕುಟುಂಬದತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ. ‘ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಹಿತವಾದ ಅನುಭವ ನೀಡುತ್ತಿದೆ. ಮನೆಯಲ್ಲಿ ನನ್ನ ಮಕ್ಕಳು ಪ್ರೀತಿಯಿಂದ ಅಪ್ಪ ಎಂದು ಕರೆಯುವುದನ್ನು ಆಸ್ವಾದಿಸುತ್ತಿದ್ದೇನೆ. ಅವರಿಗೆ ಈಜು ಮತ್ತು ಜಿಮ್ನಾಸ್ಟಿಕ್‌ನ್ನು ಹೇಳಿಕೊಡುತ್ತಿದ್ದೇನೆ. ಒಂದು ವೇಳೆ ನಾವು ಕ್ರಿಕೆಟ್ ಆಡುತ್ತಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ವಾರ್ನರ್ ಹೇಳಿದರು.

click me!