
ಬೆಂಗಳೂರು(ಡಿ.08): ತಮ್ಮ ಕ್ರಿಕೆಟ್ ಜೀವನದ ಅನುಭವ ಹೊಂದಿರುವ ‘ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್’ ಗೇಮ್'ನ್ನು ‘ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.
ಇದು ಸಚಿನ್ ಅವರ ಕ್ರಿಕೆಟ್ ಬದುಕಿನ ಸಂಪೂರ್ಣ ಮಾಹಿತಿಯನ್ನು ಅಭಿಮಾನಿಗಳಿಗೆ ಬಿಚ್ಚಿಡಲಿದೆ. ಡಿಜಿಟಲ್ ಎಂಟರ್'ಟೇನ್ಮೆಂಟ್ ಗೇಮಿಂಗ್ ಫರ್ಮ್'ನಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೇಸ್ ಸಂಸ್ಥೆ ನೂತನ ಮಾದರಿಯ ಈ ಗೇಮಿಂಗ್ ಆ್ಯಪ್'ನ್ನು ಸಿದ್ದಪಡಿಸಿದೆ.
‘1992 ಮತ್ತು 2003ರ ವಿಶ್ವಕಪ್ ವೇಳೆ ನನ್ನ ತಂಡದ ಸಹ ಆಟಗಾರರೊಂದಿಗೆ ವಿಡಿಯೋ ಪಾರ್ಲರ್'ಗೆ ತೆರಳಿರುವ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗಿದೆ. ನನ್ನ ಮಗ ಅರ್ಜುನ್'ನೊಂದಿಗೆ ಈ ಗೇಮ್ ಆಡಲು ಇಷ್ಟಪಡುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.