ಭಾರತದ 27ನೇ ಟೆಸ್ಟ್ ತಾಣವಾಗಿ ಧರ್ಮಶಾಲಾ

By Suvarna Web DeskFirst Published Mar 24, 2017, 4:01 PM IST
Highlights

ಹಿಮಾಚಲ ಪ್ರದೇಶದ ಧರ್ಮಶಾಲಾ ಟೆಸ್ಟ್ ಕ್ರಿಕೆಟ್‌'ಗೆ ಆತಿಥ್ಯ ವಹಿಸುತ್ತಿರುವ ದೇಶದ 27ನೇ ಕ್ರೀಡಾಂಗಣ ಎನ್ನುವ ಹಿರಿಮೆಗೆ ಪಾತ್ರವಾಗುತ್ತಿದೆ.

ಬೆಂಗಳೂರು(ಮಾ.24): ದ್ವಿತೀಯ ಶ್ರೇಣಿ ನಗರಗಳಿಗೂ ಟೆಸ್ಟ್ ಕ್ರಿಕೆಟ್ ಪರಿಚಯಿಸಬೇಕೆಂಬ ಬಿಸಿಸಿಐ ಯೋಜನೆಯಡಿ ಮಾನ್ಯತೆ ಪಡೆದ ಹಿಮಾಚಲ ಪ್ರದೇಶದ ಧರ್ಮಶಾಲಾ ಟೆಸ್ಟ್ ಕ್ರಿಕೆಟ್‌'ಗೆ ಆತಿಥ್ಯ ವಹಿಸುತ್ತಿರುವ ದೇಶದ 27ನೇ ಕ್ರೀಡಾಂಗಣ ಎನ್ನುವ ಹಿರಿಮೆಗೆ ಪಾತ್ರವಾಗುತ್ತಿದೆ.

2016-17ರ ತವರಿನ ಋತುವಿನಲ್ಲಿ ಬಿಸಿಸಿಐ ರಾಜ್‌'ಕೋಟ್, ಇಂದೋರ್, ಪುಣೆ, ರಾಂಚಿ ನಗರಗಳಿಗೂ ಮೊದಲ ಬಾರಿ ಟೆಸ್ಟ್ ಕ್ರಿಕೆಟ್‌'ಗೆ ಆತಿಥ್ಯ ವಹಿಸುವ ಅವಕಾಶ ಕಲ್ಪಿಸಿತ್ತು.

ಈ ಮೊದಲು ಧರ್ಮಶಾಲಾ ಭಾರತದ 3 ಏಕದಿನ ಹಾಗೂ 1 ಟಿ20 ಪಂದ್ಯಕ್ಕೆ ವೇದಿಕೆಯಾಗಿತ್ತು.

ಸಮುದ್ರ ಮಟ್ಟದಿಂದ ಸುಮಾರು 1317 ಮೀಟರ್ ಎತ್ತರದಲ್ಲಿರುವ ಧರ್ಮಶಾಲಾ ಕ್ರೀಡಾಂಗಣವು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುವ ಮೂಲಕ ಟೆಸ್ಟ್ ಆತಿಥ್ಯ ವಹಿಸುತ್ತಿರುವ ವಿಶ್ವದ 114ನೇ ಕ್ರೀಡಾಂಗಣ ಎನ್ನುವ ಹಿರಿಮೆಗೂ ಪಾತ್ರವಾಗಲಿದೆ.

click me!