
ಮುಂಬೈ(ನ.12): ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ನಡುವಿನ ಮನಸ್ತಾಪ ದೂರವಾಗಿದ್ದು ಗೆಳೆಯರಿಬ್ಬರು ಒಂದಾಗಿದ್ದಾರೆ ಎಂದುಕೆಲ ದಿನಗಳ ಹಿಂದಷ್ಟೇ ವರದಿಗಳು ಪ್ರಕಟವಾಗಿದ್ದವು.
ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಸಚಿನ್ ಹಾಗೂ ಕಾಂಬ್ಳಿ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಸ್ವತಃ ತೆಂಡುಲ್ಕರ್ ಅವರೇ ಕಾಂಬ್ಳಿ ನನ್ನ ಜೀವದ ಗೆಳೆಯ ಎಂದಿದ್ದಾರೆ. ಇನ್'ಸ್ಟಾಗ್ರಾಂನಲ್ಲಿ ವಿನೋದ್ ಕಾಂಬ್ಳಿ, ಅಜಿತ್ ಅಗರ್ಕರ್, ಅಮೊಲ್ ಮುಜುಮ್'ದಾರ್ ಹಾಗೂ ಇತರರೊಂದಿಗಿರುವ ಫೋಟೊವೊಂದನ್ನು ಪೋಸ್ಟ್ ಮಾಡಿರುವ ಸಚಿನ್, ‘ಕ್ರಿಕೆಟ್ ನನಗೆ ಕೊಟ್ಟ ಅತ್ಯಮೂಲ್ಯ ಉಡುಗೊರೆಗಳಲ್ಲಿ ನನ್ನ ಜೀವದ ಗೆಳೆಯರು ಸೇರಿದ್ದಾರೆ’ ಎಂದು ಬರೆದಿದ್ದಾರೆ.
ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಜೋಡಿ 1988ರ ಶಾಲಾ ಟೂರ್ನಿಯೊಂದರಲ್ಲಿ 664 ರನ್'ಗಳ ದಾಖಲೆಯ ಜತೆಯಾಟವಾಡುವ ಮೂಲಕ ಇತಿಹಾಸ ನಿರ್ಮಿಸಿತ್ತು. ಒಮ್ಮೆ ಟಿವಿ ಕಾರ್ಯಕ್ರಮವೊಂದರಲ್ಲಿ ತನ್ನ ಕಷ್ಟದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ತಮಗೆ ಸಾಥ್ ನೀಡಲಿಲ್ಲ ಎಂದು ಹೇಳುವ ಮೂಲಕ ವಿನೋದ್ ಕಾಂಬ್ಲಿ ಚರ್ಚೆಗೆ ಗ್ರಾಸವಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.