ರಣಜಿ ಟ್ರೋಫಿ: ನೀರಸ ಡ್ರಾನಲ್ಲಿ ಕೊನೆಯಾದ ಪಂದ್ಯ; ರಾಹುಲ್ ಶತಕ ಜಸ್ಟ್ ಮಿಸ್

Published : Nov 12, 2017, 06:01 PM ISTUpdated : Apr 11, 2018, 12:47 PM IST
ರಣಜಿ ಟ್ರೋಫಿ: ನೀರಸ ಡ್ರಾನಲ್ಲಿ ಕೊನೆಯಾದ ಪಂದ್ಯ; ರಾಹುಲ್ ಶತಕ ಜಸ್ಟ್ ಮಿಸ್

ಸಾರಾಂಶ

ರಣಜಿ ಟ್ರೋಫಿಯಲ್ಲಿ ಪದೇಪದೇ ವಿಫಲವಾಗುತ್ತಿದ್ದ ಕೆ.ಎಲ್ ರಾಹುಲ್ 92 ರನ್ ಬಾರಿಸಿದರೆ, ಸಮರ್ಥ್ 47 ರನ್ ಬಾರಿಸಿ ಔಟ್ ಆದರು.

ಆಲೂರು(ನ.12): ಬಹುತೇಕ ಏಕಪಕ್ಷೀಯವಾಗಿ ನಡೆದ ಕರ್ನಾಟಕ ಹಾಗೂ ದೆಹಲಿ ನಡುವಿನ ರಣಜಿ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯ ಕಂಡಿದೆ. 92 ರನ್ ಬಾರಿಸಿದ ರಾಹುಲ್ ಕೇವಲ 8 ರನ್'ಗಳಿಂದ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.

ಸತತ ಮೂರು ಗೆಲುವು ಕಂಡಿದ್ದ ವಿನಯ್ ಕುಮಾರ್ ಪಡೆಗೆ ಪ್ರಸಕ್ತ ಸಾಲಿನ ಮೊದಲ ಡ್ರಾ ಇದು. 'ಎ' ಗುಂಪಿನಲ್ಲಿ 3 ಗೆಲುವು 1 ಡ್ರಾನೊಂದಿಗೆ 23 ಅಂಕ ಕಲೆಹಾಕಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, 2 ಗೆಲುವು 2 ಡ್ರಾನೊಂದಿಗೆ 17 ಅಂಕ ಸಂಪಾದಿಸಿರುವ ದೆಹಲಿ 2ನೇ ಸ್ಥಾನದಲ್ಲಿ ಭದ್ರವಾಗಿದೆ.

ಮೊದಲ ಇನಿಂಗ್ಸ್'ನಲ್ಲಿ ಮಯಾಂಕ್ ಅಗರ್'ವಾಲ್(176) ಹಾಗೂ ಸ್ಟುವರ್ಟ್ ಬಿನ್ನಿ(118) ಆಕರ್ಷಕ ಶತಕಗಳ ನೆರವಿನಿಂದ 649ರನ್'ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಡೆಲ್ಲಿ, ಅನುಭವಿ ಆಟಗಾರ ಗೌತಮ್ ಗಂಭೀರ್(144) ಸಮಯೋಚಿತ ಶತಕದ ನೆರವಿನಿಂದ  301 ರನ್ ಬಾರಿಸಿ ಸರ್ವಪತನ ಕಂಡಿತು.

ಇನ್ನು ದ್ವಿತಿಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ 3 ವಿಕೆಟ್ ಕಳೆದುಕೊಂಡು 235 ರನ್ ಬಾರಿಸಿತು. ರಣಜಿ ಟ್ರೋಫಿಯಲ್ಲಿ ಪದೇಪದೇ ವಿಫಲವಾಗುತ್ತಿದ್ದ ಕೆ.ಎಲ್ ರಾಹುಲ್ 92 ರನ್ ಬಾರಿಸಿದರೆ, ಸಮರ್ಥ್ 47 ರನ್ ಬಾರಿಸಿ ಔಟ್ ಆದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ : 649/10& 235/3

ದೆಹಲಿ : 301/10

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!