ಟೀಂ ಇಂಡಿಯಾಗೆ ಹಿನ್ನಡೆಯಾಗುತ್ತಾ ಭುವನೇಶ್ವರ್ ಕುಮಾರ್ ಇಂಜುರಿ ?

By Suvarna NewsFirst Published Jul 22, 2018, 4:37 PM IST
Highlights

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಭುವಿ ಶೀಘ್ರದಲ್ಲಿ ಟೆಸ್ಟ್ ತಂಡ ಸೇರಿಕೊಳ್ಳೋದು ಅನುಮಾನ. ಇದು ಟೀಂ ಇಂಡಿಯಾಗೆ ಹಿನ್ನಡೆಯಾಗುತ್ತಾ? ಈ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು? ಇಲ್ಲಿದೆ.

ಲಂಡನ್(ಜು.22): ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಇಂಜುರಿ ಬಳಿಕ ಭುವನೇಶ್ವರ್ ಕುಮಾರ್ ಕೂಡ ಗಾಯಗೊಂಡಿದ್ದಾರೆ. ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಇಂಜುರಿಯಿಂದಾಗಿ ಇದೀಗ ಟೆಸ್ಟ್ ಸರಣಿ ಆಡೋದು ಅನುಮಾನವಾಗಿದೆ. ಟೀಂ ಇಂಡಿಯಾದ ಪ್ರಮುಖ ವೇಗಿಯ ಅಲಭ್ಯತೆ ಭಾರತಕ್ಕೆ ಹಿನ್ನಡೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಭುವನೇಶ್ವರ್ ಕುಮಾರ್ ಇಂಜುರಿ ಟೀಂ ಇಂಡಿಯಾಗೆ ನಿಜಕ್ಕೂ ಅತಿ ದೊಡ್ಡ ಹಿನ್ನಡೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಇಂಗ್ಲೆಂಡ್ ಕಂಡೀಷನ್‌ಗಳಲ್ಲಿ ಭುವನೇಶ್ವರ್ ಅತ್ಯುತ್ತಮ ಬೌಲರ್. ಟೆಸ್ಟ್ ಸರಣಿಗಳಲ್ಲಿ ಭುವಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭುವನೇಶ್ವರ್ ಅಲಭ್ಯತೆ ಟೀಂ ಇಂಡಿಯಾಗೆ ಕಾಡಲಿದೆ ಎಂದಿದ್ದಾರೆ.

2014ರ ಇಂಗ್ಲೆಂಡ್ ಪ್ರವಾಸದಲ್ಲಿ ಭುವನೇಶ್ವರ್ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಹೀಗಾಗಿ ಭುವನೇಶ್ವರ್ ಕುಮಾರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡುತ್ತಿದ್ದರು ಎಂದಿದ್ದಾರೆ. ಬುಮ್ರಾ ಅಲಭ್ಯತೆ ಏಕದಿನ ಪಂದ್ಯದಲ್ಲಿ ಕಾಡಿತ್ತು. ಆದರೆ ಭುವನೇಶ್ವರ್ ಅಲಭ್ಯತೆ ಟೆಸ್ಟ್ ಸರಣಿಯಲ್ಲಿ ಕಾಡಲಿದೆ ಎಂದಿದ್ದಾರೆ ತೆಂಡೂಲ್ಕರ್.
 

click me!