
ಮುಂಬೈ(ಫೆ.24): ಇಂದಿಗೆ ಸರಿಯಾಗಿ ಅಂದರೆ ಫೆ.24, 2010ರಲ್ಲಿ ಕ್ರಿಕೆಟ್ ಇತಿಹಾಸದಲ್ಲೊಂದು ಅಪರೂಪದ ಮೈಲಿಗಲ್ಲೊಂದು ಸ್ಥಾಪನೆಯಾದ ದಿನ. ಅದನ್ನು ಸ್ಥಾಪಿಸಿದ್ದು ಕ್ರಿಕೆಟ್ ದೇವರು ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್...
ಹೌದು ಭಾರತ ಕ್ರಿಕೆಟ್ ತಂಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸರಿಯಾಗಿ 7 ವರ್ಷಗಳ ಹಿಂದೆ ಏಕದಿನ ಕ್ರಿಕೆಟ್'ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಾಧನೆ ಮಾಡಿದ ದಿನವಾಗಿತ್ತು. ಗ್ವಾಲಿಯರ್'ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಅಜೇಯ 200ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತದ ಮೊತ್ತ 3 ವಿಕೆಟ್‌ಗೆ 401 ದಾಖಲಿಸಿತ್ತು. ಈ ಪಂದ್ಯವನ್ನು ಭಾರತ 153ರನ್‌ಗಳಿಂದ ಗೆದ್ದಿತ್ತು.
ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್'ನಲ್ಲಿ ದ್ವಿಶತಕ ಗಳಿಸಿದ್ದ ಸಚಿನ್ ಆ ದಿನ ರಾತ್ರಿ ನಿದ್ದೆ ಮಾಡಿರಲಿಲ್ಲವಂತೆ. ರಾತ್ರಿ ಹೊಟೇಲ್'ಗೆ ಹೋದಾಗ ಸಾಕಷ್ಟು ಸುಸ್ತಾಗಿದ್ದೆ. ಆದರೂ ಉತ್ಸಾಹ ಹೆಚ್ಚಾಗಿದ್ದರಿಂದ ನಿದ್ದೆ ಬಂದಿರಲಿಲ್ಲ. ಬೆಡ್‌ನಿಂದ ಎದ್ದ ನಾನು ಮೊಬೈಲ್ ನೋಡಲು ನಿರ್ಧರಿಸಿದ್ದೆ. ಮೊಬೈಲ್'ನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದಿತ್ತು. ಇದಕ್ಕೆ ಪ್ರತಿಕ್ರಿಯಿಸುವುದರಲ್ಲಿಯೇ 2 ಗಂಟೆಗಳನ್ನು ಕಳೆದಿದ್ದೆ ಎಂದು ಸಚಿನ್ ತಮ್ಮ ಆಟೋ ಬಯೋಗ್ರಾಫಿ ‘ಫ್ಲೇಯಿಂಗ್ ಇಟ್ ಮೈ ವೇ’ಯಲ್ಲಿ ಬರೆದುಕೊಂಡಿದ್ದಾರೆ.
ಸಚಿನ್ ದಾಖಲೆ ಕ್ಷಣವನ್ನು ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದ್ದು ಹೀಗೆ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.