ಅಂಡರ್-19 ಕ್ರಿಕೆಟ್: ಭಾರತ ಮತ್ತು ಇಂಗ್ಲೆಂಡ್ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

By Suvarna Web DeskFirst Published Feb 24, 2017, 2:10 PM IST
Highlights

ಡೆಲ್ರೇ ರಾವ್ಲಿನ್ಸ್ ಮತ್ತು ಜಾರ್ಜ್ ಬಾರ್ಟ್'ಲೆಟ್ ನಡುವೆ 4ನೇ ವಿಕೆಟ್'ಗೆ 121 ರನ್ ಜೊತೆಯಾಟ ಬಂದಿದ್ದು ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿತ್ತು.

ನಾಗಪುರ್(ಫೆ. 24): ಭಾರತ ಮತ್ತು ಇಂಗ್ಲೆಂಡ್ ಕಿರಿಯರ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದು ನಡೆದ ನಾಲ್ಕನೇ ಹಾಗೂ ಕೊನೆಯ ದಿನದಂದು ಇಂಗ್ಲೆಂಡ್ ಅಂಡರ್-19 ಕ್ರಿಕೆಟ್ ತಂಡವು ತನ್ನ ಎರಡನೇ ಇನ್ನಿಂಗ್ಸಲ್ಲಿ 255 ರನ್'ಗೆ ಆಲೌಟ್ ಆಗಿ ಒಟ್ಟಾರೆ 242 ರನ್ ಮುನ್ನಡೆ ಪಡೆದುಕೊಂಡಿತು. ದಿನದಾಟ ಮುಗಿಯಲು ಕೆಲವೇ ಓವರ್'ಗಳು ಬಾಕಿ ಇದ್ದರಿಂದ ಭಾರತೀಯ ಕಿರಿಯರು ಎರಡನೇ ಇನ್ನಿಂಗ್ಸ್'ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಇದರೊಂದಿಗೆ 2 ಪಂದ್ಯಗಳ ಸರಣಿಯು 0-0 ಡ್ರಾನಲ್ಲಿ ಅಂತ್ಯಗೊಂಡಂತಾಗಿದೆ.

ಈ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್'ನ ಡೆಲ್ರೇ ರಾವ್ಲಿನ್ಸ್ ಮತ್ತು ಭಾರತದ ಸೌರಭ್ ಸಿಂಗ್ ಶತಕ ಭಾರಿಸಿದ್ದು ಹೈಲೈಟ್ ಎನಿಸಿದೆ. ಇಂಗ್ಲೆಂಡ್ ಕಿರಿಯರ ಎರಡನೇ ಇನ್ನಿಂಗ್ಸ್'ನಲ್ಲಿ ಡೆಲ್ರೇ ರಾವ್ಲಿನ್ಸ್ ಮತ್ತು ಜಾರ್ಜ್ ಬಾರ್ಟ್'ಲೆಟ್ ನಡುವೆ 4ನೇ ವಿಕೆಟ್'ಗೆ 121 ರನ್ ಜೊತೆಯಾಟ ಬಂದಿದ್ದು ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿತ್ತು. ಆಂಗ್ಲರ ಬೆನ್ನೆಲುಬು ಮುರಿಯಲು ಭಾರತೀಯ ತಂಡ ಎಲ್ಲಾ ಕಸರತ್ತುಗಳನ್ನು ನಡೆಸಿತು. ವಿಕೆಟ್ ಕೀಪರ್ ಬಿಟ್ಟು ಉಳಿದೆಲ್ಲಾ 10 ಆಟಗಾರರೂ ಬೌಲಿಂಗ್ ಮಾಡಿದ್ದು ವಿಶೇಷ. ಆದರೆ, ಆಂಗ್ಲರು ಬೇಗ ಆಲೌಟ್ ಆಗದೇ ಪಂದ್ಯ ಬಚಾವ್ ಮಾಡಿಕೊಂಡರು.

ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿದ್ದರೂ ಭಾರತೀಯ ಕಿರಿಯರು ಹರಸಾಹಸ ಮಾಡಿ ಡ್ರಾ ಮಾಡಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದರೂ ಫಲಿತಾಂಶ ಮಾತ್ರ ಡ್ರಾ ಆಗಿದೆ.

ಸ್ಕೋರು ವಿವರ:

ಇಂಗ್ಲೆಂಡ್ ಅಂಡರ್-19 ತಂಡ 135.5 ಓವರ್ 375 ರನ್ ಆಲೌಟ್

ಭಾರತ ಅಂಡರ್-19 ತಂಡ 120.1 ಓವರ್ 388/9(ಡಿಕ್ಲೇರ್)

ಇಂಗ್ಲೆಂಡ್ ಅಂಡರ್-19 ತಂಡ 82 ಓವರ್ 255 ರನ್ ಆಲೌಟ್
(ಜಾರ್ಜ್ ಬಾರ್'ಟ್ಲೆಟ್ 76, ಡೆಲ್'ರೇ ರಾಲಿನ್ಸ್ 49, ಆರೋನ್ ಬಿಯರ್ಡ್ ಅಜೇಯ 34 ರನ್ - ಹರ್ಷ್ ತ್ಯಾಗಿ 67/4)

click me!