ಕ್ರಿಕೆಟ್ ಅಭಿಮಾನಿಗಳಿಗೂ ತಟ್ಟಿದ ನೋಟಿನ ಬಿಸಿ!

Published : Nov 09, 2016, 04:06 PM ISTUpdated : Apr 11, 2018, 12:34 PM IST
ಕ್ರಿಕೆಟ್ ಅಭಿಮಾನಿಗಳಿಗೂ ತಟ್ಟಿದ ನೋಟಿನ ಬಿಸಿ!

ಸಾರಾಂಶ

ತಮ್ಮ ನೆಚ್ಚಿನ ಕ್ರಿಕೆಟ್ ಕಲಿಗಳನ್ನು ನೋಡಲು ದೂರದ ಊರುಗಳಿಂದ ರಾಜ್‌ಕೋಟ್‌ಗೆ ದೌಡಾಯಿಸಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮಲ್ಲಿನ 500, 1000 ನೋಟುಗಳು ಚಲಾವಣೆಯಾಗದೆ, ಚಿಲ್ಲರೆಗಾಗಿ ಪರದಾಡಿದರು

ರಾಜ್'ಕೋಟ್(ನ.09): ಕೇಂದ್ರ ಸರ್ಕಾರವು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದರ ಬಿಸಿ ಕ್ರಿಕೆಟ್ ಲೋಕಕ್ಕೂ ತಟ್ಟಿದೆ.

ಇಂದಿನಿಂದ ಆರಂಭವಾದ ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೋಡಲು ಟಿಕೆಟ್ ಖರೀದಿಗಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಂಧೇರಿ ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೇಂದ್ರ ಸರ್ಕಾರದ ನಿರ್ಧಾರ ತೀವ್ರ ನಿರಾಸೆ ತಂದಿತು.

ತಮ್ಮ ನೆಚ್ಚಿನ ಕ್ರಿಕೆಟ್ ಕಲಿಗಳನ್ನು ನೋಡಲು ದೂರದ ಊರುಗಳಿಂದ ರಾಜ್‌ಕೋಟ್‌ಗೆ ದೌಡಾಯಿಸಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮಲ್ಲಿನ 500, 1000 ನೋಟುಗಳು ಚಲಾವಣೆಯಾಗದೆ, ಚಿಲ್ಲರೆಗಾಗಿ ಪರದಾಡಿದರು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು 500,  1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಅಭಿಮಾನಿಗಳನ್ನು ನಿರಾಸೆಗೊಳಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ ಕ್ರಿಕೆಟ್ ರಿಜಿಸ್ಟ್ರೇಷನ್ ಶೀಟ್ ವೈರಲ್..! ಕೋಚ್ ರಾಜ್‌ಕುಮಾರ್ ಶರ್ಮಾ ವಿರಾಟ್‌ಗೆ ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?
'ನನ್ನನ್ನು ಅವರು ಅನ್‌ಬ್ಲಾಕ್ ಮಾಡೋದೇ ಇಲ್ಲ': ಸನ್‌ರೈಸರ್ಸ್ ಹೈದರಾಬಾದ್ ಜೊತೆಗಿನ ಸಿಟ್ಟು ಬಿಚ್ಚಿಟ್ಟ ಡೇವಿಡ್ ವಾರ್ನರ್