ಮುಂದಿನ್ ಸಲ ಕಪ್ ನಮ್ದೆ:ಪ್ಲೇಆಫ್'ನಿಂದ ಔಟ್

First Published May 19, 2018, 7:54 PM IST
Highlights

ಆರ್'ಸಿಬಿ ಬೌಲರ್'ಗಳನ್ನು ಕಟ್ಟಿ ಹಾಕಿದ ಶ್ರೇಯಸ್ ಗೋಪಾಲ್ 16/4 ವಿಕೇಟ್ ಪಡೆಯುವುದರೊಂದಿಗೆ ಯಶಸ್ವಿ ಬೌಲರ್ ಎನಿಸಿದರು.ಉನಾದಕ್ತ್ 27/2, ಲಾಫ್ಲಿನ್ 15/2  ಬೆಂಗಳೂರನ್ನು 134 ರನ್'ಗಳಿಗೆ ಆಲ್'ಔಟ್ ಆಗಲು ಕಾರಣರಾದರು.

ಜೈಪುರ(ಮೇ.19): ಕನ್ನಡಿಗ ಶ್ರೇಯಸ್ ಗೋಪಾಲ್ ದಾಳಿಗೆ ಕುಸಿದ ಆರ್'ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 30 ರನ್'ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಪ್ಲೇಆಫ್'ನಿಂದ ಬೆಂಗಳೂರು ಬಹುತೇಕ ಹೊರನಡೆದಿದೆ.  
ಎಬಿಡಿ ವಿಲಿಯರ್ಸ್ ಅರ್ಧ ಶತಕ(53, 35 ಚಂಡು, 7 ಬೌಂಡರಿ) ಹಾಗೂ ಪಾರ್ಥಿವ್ ಪಟೇಲ್ (33, 21 ಎಸೆತ , 3 ಬೌಂಡರಿ, 2 ಸಿಕ್ಸ್ ) ಹೊರತುಪಡಿಸಿದರೆ ಉಳಿದವರ್ಯಾರು ಕಠಿಣ ಶ್ರಮ ತೋರಲಿಲ್ಲ. ಆರ್'ಸಿಬಿ ಬೌಲರ್'ಗಳನ್ನು ಕಟ್ಟಿ ಹಾಕಿದ ಶ್ರೇಯಸ್ ಗೋಪಾಲ್ 16/4 ವಿಕೇಟ್ ಪಡೆಯುವುದರೊಂದಿಗೆ ಯಶಸ್ವಿ ಬೌಲರ್ ಎನಿಸಿದರು.ಉನಾದಕ್ತ್ 27/2, ಲಾಫ್ಲಿನ್ 15/2  ಬೆಂಗಳೂರನ್ನು 134 ರನ್'ಗಳಿಗೆ ಆಲ್'ಔಟ್ ಆಗಲು ಕಾರಣರಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ಎರಡನೇ ವಿಕೆಟ್’ಗೆ ನಾಯಕ ರಹಾನೆ ಹಾಗೂ ರಾಹುಲ್ ತ್ರಿಪಾಠಿ 99 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 164ಕ್ಕೆ ದಾಖಲಿಸಿದರು.

ಸ್ಕೋರ್ 
ರಾಜಸ್ಥಾನ್ ರಾಯಲ್ಸ್ 20 ಓವರ್'ಗಳಲ್ಲಿ 164/5
(ತ್ರಿಪಾಠಿ 80,ರಹಾನೆ 33, ಯು.ಯಾದವ್ 25/3)

ಆರ್'ಸಿಬಿ 19.2 ಓವರ್'ಗಳಲ್ಲಿ 134/10
(ಎಬಿಡಿ 53, ಶ್ರೇಯಸ್ 16/4 )

ಫಲಿತಾಂಶ: ರಾಜಸ್ಥಾನ್ ರಾಯಲ್ಸ್  30 ರನ್ ಜಯ

ಪಂದ್ಯ ಶ್ರೇಷ್ಠ:  ಶ್ರೇಯಸ್ 16/4         

click me!