ಇಂದೋರ್'ನಲ್ಲಿ ರನ್ ಸುರಿಮಳೆ; ಸ್ಫೋಟಕ ಶತಕ ಸಿಡಿಸಿದ ರೋಹಿತ್

Published : Dec 22, 2017, 09:04 PM ISTUpdated : Apr 11, 2018, 12:44 PM IST
ಇಂದೋರ್'ನಲ್ಲಿ ರನ್ ಸುರಿಮಳೆ; ಸ್ಫೋಟಕ ಶತಕ ಸಿಡಿಸಿದ ರೋಹಿತ್

ಸಾರಾಂಶ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನೇ ನೀಡಿತು. ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಮೊದಲ 10 ಓವರ್'ಗಳಲ್ಲಿ 117 ರನ್ ಕಲೆ ಹಾಕಿತು.

ಇಂದೋರ್(ಡಿ.22): ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ, ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ ಅರ್ಧಶತಕದ ನೆರವಿನಿಂದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 260 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನೇ ನೀಡಿತು. ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಮೊದಲ 10 ಓವರ್'ಗಳಲ್ಲಿ 117 ರನ್ ಕಲೆ ಹಾಕಿತು. ರೋಹಿತ್ ಶರ್ಮಾ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕ ಪೂರೈಸಿದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಟವಾಡಿದ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಶರ್ಮಾ 118 ರನ್ ಬಾರಿಸಿ ಚಮೀರಾಗೆ ವಿಕೆಟ್ ಒಪ್ಪಿಸಿದರು. ಅವರ ಸೊಗಸಾದ ಇನಿಂಗ್ಸ್'ನಲ್ಲಿ 12 ಬೌಂಡರಿ ಹಾಗೂ 10 ಸಿಕ್ಸರ್'ಗಳು ಸೇರಿದ್ದವು. ಮೊದಲ ವಿಕೆಟ್'ಗೆ ರೋಹಿತ್-ರಾಹುಲ್ ಜೋಡಿ 165 ರನ್'ಗಳ ಜತೆಯಾಟವಾಡಿತು.

ಒಂದು ಕಡೆ ರೋಹಿತ್ ಆರ್ಭಟಿಸುತ್ತಿದ್ದಾಗ ಅವರಿಗೆ ತಕ್ಕ ಸಾಥ್ ನೀಡುತ್ತಿದ್ದ ರಾಹುಲ್ 35ನೇ ಎಸೆತದಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು. ಆನಂತರ ಸ್ಫೋಟಕ ಇನಿಂಗ್ಸ್ ಕಟ್ಟಿದ ರಾಹುಲ್ 89 ರನ್ ಬಾರಿಸಿ ಪ್ರದೀಪ್'ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಆಕರ್ಷಕ ಇನಿಂಗ್ಸ್'ನಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್'ಗಳು ಸೇರಿದ್ದವು. ಆ ನಂತರವೂ ಪಾಂಡ್ಯ, ಧೋನಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕದೊಂದಿಗೆ ಜಂಟಿ ಎರಡನೇ ಗರಿಷ್ಠ ರನ್ ಕಲೆಹಾಕಿದ ಕೀರ್ತಿಗೆ ಭಾಜನವಾಯಿತು.   

ಸಂಕ್ಷಿಪ್ತ ಸ್ಕೋರ್:

ಭಾರತ: 260/5

ರೋಹಿತ್ ಶರ್ಮಾ: 118

ಕೆ.ಎಲ್ ರಾಹುಲ್: 89

ಪೆರೇರಾ: 49/2

(*ವಿವರ ಅಪೂರ್ಣ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?