ಫ್ರೆಂಚ್ ಓಪನ್: ರೋಹನ್ ಬೋಪಣ್ಣಗೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ; ದಿಗ್ಗಜರ ಸಾಲಿಗೆ ಸೇರ್ಪಡೆಯಾದ ಕೊಡಗಿನ ಕುವರ

By Suvarna Web DeskFirst Published Jun 8, 2017, 6:26 PM IST
Highlights

ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಅವರು ಗ್ರ್ಯಾನ್'ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಇತರ ಭಾರತೀಯ ಟೆನಿಸ್ ಆಟಗಾರರಾಗಿದ್ದಾರೆ. ಈ ದಿಗ್ಗಜರ ಸಾಲಿಗೆ ಈಗ ಕನ್ನಡಿಗ ಬೋಪಣ್ಣ ಸೇರ್ಪಡೆಯಾಗಿದ್ದಾರೆ.

ಪ್ಯಾರಿಸ್(ಜೂನ್ 08): ಭಾರತದ ಟೆನಿಸ್ ಗ್ರ್ಯಾನ್'ಸ್ಲಾಂ ಸಾಧಕರ ಪಟ್ಟಿಗೆ ರೋಹನ್ ಬೋಪಣ್ಣ ಸೇರ್ಪಡೆಯಾಗಿದ್ದಾರೆ. ಕೊಡಗಿನ ಹುಡುಗ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗೆದ್ದಿದ್ದಾರೆ. ಇಂದು ನಡೆದ ಮಿಕ್ಸೆಡ್ ಡಬಲ್ಸ್ ಫೈನಲ್'ನಲ್ಲಿ ರೋಹನ್ ಬೋಪಣ್ಣ ಮತ್ತು ಕೆನಡಾದ ಗೆಬ್ರೀಲಾ ಡಾಬ್ರೋವ್'ಸ್ಕಿ ಜೋಡಿ 2-6, 6-2, 12-10 ಸೆಟ್'ಗಳಿಂದ ಜರ್ಮನಿಯ ಆನ್ನಾ ಲೆನಾ ಗ್ರೋನೆಫೆಲ್ಡ್ ಮತ್ತು ಕೊಲಂಬಿಯಾದ ರಾಬರ್ಟ್ ಫಾರಾ ಜೋಡಿ ವಿರುದ್ಧ ರೋಚಕ ಜಯ ಸಾಧಿಸಿದೆ.

ರೋಹನ್ ಬೋಪಣ್ಣಗೆ ಇದು ಚೊಚ್ಚಲ ಗ್ರ್ಯಾನ್'ಸ್ಲಾಂ ಪ್ರಶಸ್ತಿಯಾಗಿದೆ. 2010ರಲ್ಲಿ ಯುಎಸ್ ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಐಸಮುಲ್ ಖುರೇಷಿ ಜೊತೆಗೂಡಿ ಫೈನಲ್ ತಲುಪಿದ್ದು ಬೋಪಣ್ಣರ ಬೆಸ್ಟ್ ಪರ್ಫಾರ್ಮೆನ್ಸ್ ಆಗಿತ್ತು.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಅವರು ಗ್ರ್ಯಾನ್'ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಇತರ ಭಾರತೀಯ ಟೆನಿಸ್ ಆಟಗಾರರಾಗಿದ್ದಾರೆ. ಈ ದಿಗ್ಗಜರ ಸಾಲಿಗೆ ಈಗ ಕನ್ನಡಿಗ ಬೋಪಣ್ಣ ಸೇರ್ಪಡೆಯಾಗಿದ್ದಾರೆ.

click me!