
ಬೆಂಗಳೂರು(ಮೇ.24): ಐಪಿಎಲ್'ನಲ್ಲಿ ಕೆಕೆಆರ್ ಪರವಾಗಿ ಆಡುವ ವಿಸ್ಪೋಟಕ ಬ್ಯಾಟ್ಸ್'ಮನ್ ರಾಬಿನ್ ಉತ್ತಪ್ಪ ಇದೀಗ ಐಪಿಎಲ್'ನಲ್ಲಿ ಮಾತ್ರವ;ಲ್ಲದೆ ಬದಲಾಗಿ ರಣಜಿ ಟ್ರೋಫಿಯಲ್ಲೂ ರಾಜ್ಯದ ತಂಡಕ್ಕೆ ವಿದಾಯ ಹೇಳುವ ಸಾಧ್ಯತೆಗಳಿವೆ. ಸದ್ಯ ಉತ್ತಪ್ಪ ಕರ್ನಾಟಕ ರಣಜಿ ತಂಡದ ಪರವಾಗಿ ಆಡುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಅವರು ತಮ್ಮ ತಂಡ ಬದಲಾಯಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ದಟ್ಟವಾಗಿದೆ.
ಇದನ್ನು ಕೇವಲ ಗಾಸಿಪ್ ಎಂದು ಅಲ್ಲಗಳೆಯಬಹುದಿತ್ತೇನೋ ಆದರೆ ಮಂಗಳವಾರದಂದು ಕೇರಳ ಕ್ರಿಕೆಟ್ ಸಂಘ 'ಎಲ್ಲವೂ ಸರಿಯಾಗಿದ್ದರೆ ಉತ್ತಪ್ಪ ತನ್ನ ತಂಡವನ್ನು ತೊರೆಯುತ್ತಾರೆ' ಎಂದು ತಿಳಿಸಿದ್ದು, ಈ ಸುದ್ದಿಯನ್ನು ಪುಷ್ಠೀಕರಿಸಿವೆ. ಐಪಿಎಲ್ ಮಾತ್ರವಲ್ಲದೇ ಸೀಮಿತ ಓವರ್'ಗಳ ಸ್ವದೇಶಿ ಕ್ರಿಕೆಟ್'ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಬಿನ್ ಉತ್ತಪ್ಪ ಟೀಂ ಇಂಡಿಯಾಗೆ ವಾಪಾಸಾಗುವ ಅವಕಾಶಕ್ಕೆ ತುಂಬಾ ಕಾಲದಿಂದ ಕಾಯುತ್ತಿದ್ದಾರೆ ಎಂಬ ಮಾತನ್ನು ನೆನಪಿಸಿಕೊಳ್ಳಲೇಬೇಕು.
2002ರಲ್ಲಿ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಕರ್ನಾಟಕದ 31 ವರ್ಷದ ರಾಬಿನ್ ಉತ್ತಪ್ಪ ಈವರೆಗೂ ತನ್ನ ರಾಜ್ಯದ ಪರವಾಗಿ, ತನ್ನ ನಾಡಿಗಾಗಿ ಆಡಿದ ಕನ್ನಡಿಗ. ಆದರೆ ಈಗ ಕೇರಖಳ ಕ್ರಿಕೆಟ್ ಸಂಘದ ಸಚಿವ ಜಯೇಶ್ ಜಾರ್ಜ್ ಮಾತನಾಡಿ 'ರಾಬಿನ್ ಉತ್ತಪ್ಪ ಈ ವರ್ಷದ ರಣಜಿ ಟ್ರೋಫಿಯಲ್ಲಿ ಕೇರಳವನ್ನು ಪ್ರತಿನಿಧಿಸಲಿದ್ದಾರೆ. ಔಪಚಾರಿಕಾವಿ ಈ ಕುರಿತಾದ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಅಂದರೆ ಇನ್ನು ಒಂದು ವಾರದ ಒಳಗಾಗಿ ಈ ಕುರಿತಾಗಿ ಘೋಷಣೆ ಮಾಡಲಿದ್ದೇವೆ' ಎಂದಿದ್ದಾರೆ. ಆದರಿನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ರಾಬಿನ್ ಉತ್ತಪ್ಪರೊಂದಿಗೆ ಆದ ಮಾತುಕತೆಯ ಕುರಿತಾಗಿ ಮಾತನಾಡಿದ ಜಾರ್ಜ್ 'ಆರ್'ಸಿಬಿ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದೊಂದಿಗೆ ಉತ್ತಮ್ಮ ಆಗಮಿಸಿದ ಸಂದರ್ಭದಲ್ಲಿ ಕೆಸಿಎ(ಕೇರಳ ಕ್ರಿಕೆಟ್ ಅಸೋಸಿಯೇಷನ್) ಮಾಜಿ ಅಧ್ಯಕ್ಷ ಕೆಸಿ ಮ್ಯಾಥ್ಯೂ ಉತ್ತಪ್ಪರವರನ್ನು ಸಂಪರ್ಕಿಸಿ, ಸಮನ್ವಯ ನಡೆಸಿದ್ದರು. ಈ ವೇಳೆ ಉತ್ತಪ್ಪ ಕೂಡಾ ಆಸಕ್ತಿ ತೋರಿಸಿದ್ದರು, ನಮಗೂ ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಇಚ್ಛೆ ಇದೆ. ನಾವೂ ಮಲಯಾಳಂನಲ್ಲಿ ಮಾತನಾಡಬಲ್ಲ ಓರ್ವ ಅದ್ಭುತ ಬ್ಯಾಟ್ಸ್'ಮನ್ ಹುಡುಕಾಟದಲ್ಲಿದ್ದೆವು. ಉತ್ತಪ್ಪ ಇದಕ್ಕೆ ಫಿಟ್ ಆಗಿದ್ದರೆ' ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ರಾಬಿನ್ ಉತ್ತಪ್ಪಪ್ಪರವರನ್ನು ಪ್ರಶ್ನಿಸಿದಾಗ 'ಈ ಕುರಿತಾಗಿ ಆಫ್ ದಿ ರೆಕಾರ್ಡ್ ಅಥವಾ ಆನ್ ದಿ ರೆಕಾರ್ಡ್ ಯಾವುದೇ ಪ್ರತಿಕ್ರಿಯೆ ನೀಡಲಿಚ್ಛಿಸುವುದಿಲ್ಲ. ಆದರೆ ಸಮಯ ಬಂದಾಗ ಈ ಕುರಿತಾಗಿ ನಿಶ್ಚಿತವಾಗಿ ಮಾತನಾಡುತ್ತೇನೆ. ಎಂದಿದ್ದಾರೆ. ಇನ್ನು ಈ ಬಾರಿಯ ಐಪಿಎಲ್'ನಲ್ಲಿ ಅವರಾಡಿದ 14 ಪಂದ್ಯಗಳಲ್ಲಿ ಒಟ್ಟು 388 ರನ್ ಗಳಿಸಿದ್ದಾರೆ ಎಂಬುವುದು ಗಮನಾರ್ಹ ವಿಚಾರ
ಕೃಪೆ: NDTv
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.