ಐಪಿಎಲ್ ಹಣದಿಂದ ನನಸಾಯಿತು ಕೋಲ್ಕತ್ತಾ ವೇಗಿಯ ಕನಸು!

By Web DeskFirst Published Aug 14, 2018, 3:55 PM IST
Highlights

ಐಪಿಎಲ್ ಟೂರ್ನಿಯ ಹಣದಿಂದ ಹಲವು ಕ್ರಿಕೆಟಿಗರು ಕಾರು, ಬೈಕ್ ಸೇರಿದಂತೆ ಲಕ್ಸುರಿ ವಾಹನಗಳನ್ನ ಖರೀದಿಸಿದ್ದಾರೆ. ಆದರೆ ಕೋಲ್ಕತ್ತಾ ವೇಗಿ ತಮ್ಮ ಬಂದ ಐಪಿಎಲ್ ಹಣದಲ್ಲಿ ಏನು ಮಾಡಿದರು? ಇಲ್ಲಿದೆ.
 

ಉತರಪ್ರದೇಶ(ಆ.14): ಐಪಿಎಲ್ ಟೂರ್ನಿ ಭಾರತೀಯ ಯುವ ಪ್ರತಿಭೆಗಳಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿದೆ. ಐಪಿಎಲ್ ಟೂರ್ನಿ ಮೂಲಕ ಯುವ ಪ್ರತಿಭೆಗಳು ಟೀಂ ಇಂಡಿಯಾವನ್ನ ಪ್ರತಿನಿಧಿಸಿದ್ದಾರೆ. ಇಷ್ಟೇ ಅಲ್ಲ, ಈ ಐಪಿಎಲ್ ಟೂರ್ನಿಯಿಂದ ಅದೆಷ್ಟೋ ಕ್ರಿಕೆಟಿಗರು ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ.

2018ರ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಉತರ ಪ್ರದೇಶ ಬ್ಯಾಟ್ಸ್‌ಮನ್ ರಿಂಕು ಸಿಂಗ್ 80 ಲಕ್ಷ ರೂಪಾಯಿಗೆ  ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಕೆಕೆಆರ್ ಪರ 4 ಪಂದ್ಯ ಆಡಿದ ರಿಂಕು ಸಿಂಗ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಮನೀಶ್ ಪಾಂಡೆ ಕ್ಯಾಚ್ ಹಿಡಿದು ಜನಪ್ರೀಯರಾಗಿದ್ದಾರೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್‌ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಆದರೆ ತಮ್ಮ ಕನಸನ್ನ ನನಸು ಮಾಡಿಕೊಳ್ಳಲು ಐಪಿಎಲ್ ಸಹಕಾರಿಯಾಗಿದೆ. ಐಪಿಎಲ್ ಹರಾಜಿನಲ್ಲಿ ಬಂದ ಹಣದಿಂದ ರಿಂಕು ಸಿಂಗ್ ತಮ್ಮ  ಹುಟ್ಟೂರಿನಲ್ಲಿ ಮನೆ ಕಟ್ಟಿಸಿದ್ದಾರೆ. ಈ ಮೂಲಕ ತಮ್ಮ ಬಹುದಿನಗಳ ಕನಸನ್ನ ನನಸು ಮಾಡಿಕೊಂಡಿದ್ದಾರೆ.

ಸ್ವಂತ ಮನೆ ಕಟ್ಟೋ ಮೊದಲು ರಿಂಕು ಸಿಂಗ್, ಗ್ಯಾಸ್ ಕಂಪೆನಿಯ ಗೊಡೌನ್ ನಲ್ಲಿನ 2 ರೂಮ್‌ನಲ್ಲಿ ವಾಸ್ತವ್ಯವಿದ್ದರು. ಇದೀಗ ಸ್ವಂತ ಮನೆ ಕಟ್ಟಿರುವ ರಿಂಕು ಪೋಷಕರ ಸಂತಸಕ್ಕೆ ಕಾರಣವಾಗಿದ್ದಾರೆ. 

click me!