ಧೋನಿಗಿಂತ ಹೆಚ್ಚು ಸೆಂಚುರಿ ಸಿಡಿಸಲಿದ್ದಾರೆ ಪಂತ್: ಪಾಂಟಿಂಗ್ ಭವಿಷ್ಯ!

By Web Desk  |  First Published Jan 5, 2019, 9:46 AM IST

ಎಂ.ಎಸ್.ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ವಿಕೆಟ್ ಕೀಪರ್. ಆದರೆ ರಿಷಬ್ ಪಂತ್ ಪ್ರತಿಭೆಯ ಧೋನಿಯನ್ನೇ ಮೀರಿಸಲಿದೆ ಎಂದು ಆಸಿಸ್ ದಿಗ್ಗಜ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಪಾಂಟಿಂಗ್ ಈ ಹೇಳಿಕೆಗೆ ಕಾರಣವೇನು? ಇಲ್ಲಿದೆ ವಿವರ.


ಸಿಡ್ನಿ(ಜ.05): ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಹಲವು ದಾಖಲೆ ನಿರ್ಮಿಸಿದ್ದಾರೆ. ಅಜೇಯ 159 ರನ್ ಸಿಡಿಸೋ ಮೂಲಕ ಧೋನಿ ಸೇರಿದಂತೆ ದಿಗ್ಗಜ ವಿಕೆಟ್ ಕೀಪರ್ ದಾಖಲೆ ಮುರಿದಿದ್ದಾರೆ. ಇದೀಗ ಪಂತ್ ಬ್ಯಾಟಿಂಗ್ ಕುರಿತಿ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: 'I Love You So Much'- ವಿಶೇಷ ವ್ಯಕ್ತಿಗೆ ಶತಕ ಅರ್ಪಿಸಿದ ಪಂತ್..!

Tap to resize

Latest Videos

ಪಂತ್ ಅದ್ಬುತ ಪ್ರತಿಭೆ. ಡೆಲ್ಲಿ ಡೇರ್ ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್) ಪಂತ್ ಬ್ಯಾಟಿಂಗ್ ಹಾಗೂ ಕೀಪಿಂಗ್‌ನ್ನ ಹತ್ತಿರದಿಂದ ಗಮನಿಸಿದ್ದೇನೆ. ಟ್ಯಾಲೆಂಟ್ ಕ್ರಿಕೆಟರ್ ಭಾರತದ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇಷ್ಟೇ ಎಲ್ಲ ಎಂ.ಎಸ್.ಧೋನಿಗಿಂತ ಹೆಚ್ಚು ಸೆಂಚುರಿ ಸಿಡಿಸಲಿದ್ದಾರೆ ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್!

ಇಂಗ್ಲೆಂಡ್ ಬಳಿಕ ಇದೀಗ ಆಸ್ಟ್ರೇಲಿಯಾದಲ್ಲೂ ಪಂತ್ ಸೆಂಚುರಿ ಸಿಡಿಸೋ ಮೂಲಕ 2 ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಎರಡು ಬಾರಿ 90 ಪ್ಲಸ್ ರನ್ ಸಿಡಿಸಿದ ಸಾಧನೆಯನ್ನೂ ಮಾಡಿದ್ದಾರೆ. 21 ವರ್ಷದ ಪಂತ್ ವಿಕೆಟ್ ಕೀಪಿಂಗ್ ಕುರಿತು ಹೆಚ್ಚಿನ ಗಮನ ನೀಡಬೇಕು ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ.

click me!