ಇಂಜುರಿಯಿಂದ ಚೇತರಿಕೆ - 2019ರ ಐಪಿಎಲ್‌ಗೆ ಪೃಥ್ವಿ ಶಾ ಲಭ್ಯ!

By Web Desk  |  First Published Jan 21, 2019, 8:03 PM IST

ಟೀಂ ಇಂಡಿಯಾ ಭರವಸೆ ಬ್ಯಾಟ್ಸ್‌ಮನ್ ಪೃಥ್ವಿ ಶಾ 2019ರ ಐಪಿಎಲ್ ಟೂರ್ನಿಗೆ ಲಭ್ಯರಿದ್ದಾರೆ ಎಂದಿದ್ದಾರೆ. ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರೋ ಪೃಥ್ವಿ ಶಾ, ಶೀಘ್ರದಲ್ಲೇ ತಂಡಕ್ಕೆ ಮರಳೋದಾಗಿ ಹೇಳಿದ್ದಾರೆ.
 


ಮುಂಬೈ(ಜ.21): ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಪೃಥ್ವಿ ಶಾ ಇದೀಗ ಚೇತರಿಕೆ ಕಂಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಪೃಥ್ವಿ ಶಾ ಸಂಪೂರ್ಣ ಫಿಟ್ ಆಗಲಿದ್ದಾರೆ. ಇಷ್ಟೇ ಅಲ್ಲ 2019ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಸೆಹ್ವಾಗ್ ದಾಖಲೆ ಪುಡಿ ಮಾಡಲು ಸಜ್ಜಾದ ಕೊಹ್ಲಿ!

Tap to resize

Latest Videos

undefined

ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. 2019ರ ಐಪಿಎಲ್ ಟೂರ್ನಿಗೂ ಮೊದಲು ಸಂಪೂರ್ಣ ಫಿಟ್ ಆಗಲಿದ್ದೇನೆ. ಇದೀಗ ಅಭ್ಯಾಸ ಆರಂಭಿಸಿದ್ದೇನೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಸತತ 2ನೇ ವರ್ಷ ಪೃಥ್ವಿ ಶಾ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: IPL ಆರಂಭಕ್ಕೂ ಮುನ್ನ RCB ಪಡೆಗೆ ಮುಖಭಂಗ!

ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಪೃಥ್ವಿ ಶಾ ಕಾಲಿಗೆ ಇಂಜುರಿಯಾಗಿತ್ತು. ಹೀಗಾಗಿ ಇಡೀ ಟೂರ್ನಿಯಿಂದ ಶಾ ಹೊರಬಿದ್ದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿ ಆಸಿಸ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಪೃಥ್ವಿಗೆ ಇಂಜುರಿ ಸಮಸ್ಯೆ ಬಹುವಾಗಿ ಕಾಡಿತ್ತು.

click me!