ಕನ್ನಡಿಗ ರಾಹುಲ್'ಗೆ ಇಂದು ರಿಯಲ್ ಟೆಸ್ಟ್: ಉತ್ತಮ ರೆಕಾರ್ಡ್ ಇರುವ ಅದ್ಭುತ ಆಟಗಾರನಿಗೆ ಯಾಕಿಂಥ ಶಿಕ್ಷೆ..?

Published : Sep 06, 2017, 03:35 PM ISTUpdated : Apr 11, 2018, 12:57 PM IST
ಕನ್ನಡಿಗ ರಾಹುಲ್'ಗೆ ಇಂದು ರಿಯಲ್ ಟೆಸ್ಟ್: ಉತ್ತಮ ರೆಕಾರ್ಡ್ ಇರುವ ಅದ್ಭುತ ಆಟಗಾರನಿಗೆ ಯಾಕಿಂಥ ಶಿಕ್ಷೆ..?

ಸಾರಾಂಶ

ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಆದರೆ ಟೀಂ ಇಂಡಿಯಾದ ಆಯ್ಕೆ ಸಮಿತಿ ಮಾತ್ರ ಇಂದು ಕನ್ನಡಿಗ ಕೆ.ಎಲ್​​ ರಾಹುಲ್​ನ ಮೇಲೆ ಹದ್ದಿನ ಕಣ್ಣಿಡಲಿದೆ. ಆತನ ಬ್ಯಾಟಿಂಗ್​​ ಅನ್ನ ಸಿರೀಯಸ್​​​​​ಆಗಿ ವೀಕ್ಷಿಸಲಿದೆ. ಅಷ್ಟಕ್ಕೂ ಆಯ್ಕೆ ಸಮಿತಿ ರಾಹುಲ್​ ಬಗ್ಗೆ ಅಷ್ಟು ತಲೆ ಕೆಡಸಿಕೊಳ್ಳಲು ಕಾರಣವೇನು..? ರಾಹುಲ್​​ ಮಾಡಿದ ತಪ್ಪಾದ್ರೂ ಏನು..? ಇಲ್ಲಿದೆ ವಿವರ  

ಕೆ.ಎಲ್​ ರಾಹುಲ್​​, ಸದ್ಯ ಟೀಂ ಇಂಡಿಯಾದ ಖಾಯಂ ಆಟಗಾರ. ಟೆಸ್ಟ್​​​ , ಒನ್​​​ಡೇ ಮತ್ತು ಟಿ20 ಮೂರು ಫಾರ್ಮೆಟ್​​​ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಮಾಹಾನ್​​ ಕ್ರಿಕೆಟಿಗ. ಆದ್ರೆ ರಾಹುಲ್​ ಟೆಸ್ಟ್​​​ ಫರ್ಮೆಟ್​​​ ಬಿಟ್ರೆ ಹೆಚ್ಚು ಯಶಸ್ಸು ಗಳಿಸಿರೋದು ಟಿ20 ಕ್ರಿಕೆಟ್​ನಲ್ಲಿ. ಬೆರಳೆಣಿಕೆಯಷ್ಟು ಪಂದ್ಯಗಳನ್ನಾಡಿದರೂ ವಿಶ್ವವವೇ ಮೆಚ್ಚುವಂಥಹ ಆಟವನ್ನಾಡಿದ್ದಾರೆ. ಅದರಲ್ಲೂ ಜಿಂಬಾಬ್ವೆ ವಿರುದ್ಧ ಈತ ಸಿಡಿಸಿದ ಶತಕ ಇನ್ನೂ ಅಭಿಮಾನಿಗಳ ಮನಸಿನಿಂದ ಮಾಸೇ ಇಲ್ಲ.

ಕೆ.ಎಲ್​​ ರಾಹುಲ್​​​ರ ಟಿ20 ಪ್ರದರ್ಶನ ಇಂತಿದೆ. ಇದುವರೆಗೂ 8 ಟಿ20 ಪಂದ್ಯಗಳನ್ನಾಡಿರುವ ರಾಹುಲ್​, 280 ರನ್​ಗಳನ್ನ ಗಳಿಸಿದ್ದಾರೆ. 56ರ ಸರಾಸರಿಯಲ್ಲಿ ಬ್ಯಾಟ್​​ ಮಾಡಿ 150.53 ಸ್ಟ್ರೈಕ್​​ ರೇಟ್​​ ಹೊಂದಿದ್ದಾರೆ.  1 ಶತಕ ಮತ್ತು 1 ಅರ್ಧ ಶತಕ ರಾಹುಲ್​ ಟಿ20 ರೆಕಾರ್ಡ್​ನಲ್ಲಿದೆ. ಜಿಂಬಾಬ್ವೆ ವಿರುದ್ಧ ಸಿಡಿಸಿದ 110 ಅವರ ಬೆಸ್ಟ್​​ ಇನ್ನಿಂಗ್ಸ್​​ ಆಗಿದೆ.

ರಾಹುಲ್'​​ರ ಈ ರೆಕಾರ್ಡ್​ ನೋಡಿದರೆ ರಾಹುಲ್​​ ಎಂಥ ಟಿ20 ಪ್ಲೇಯರ್​​​ ಎನ್ನುವುದು ಗೊತ್ತಾಗುತ್ತದೆ. ಆದ್ರೆ ಇಷ್ಟೆಲ್ಲಾ ರೆಕಾರ್ಡ್​ ಮಾಡಿದ್ರೂ ಕೆ.ಎಲ್​ ರಾಹುಲ್​​​'ಗೆ ಇಂದಿನ ಮ್ಯಾಚ್​​ನಲ್ಲಿ ತಮಬಾನೆ ಒತ್ತಡವಿದೆ. ತಂಡದಲ್ಲಿನ ಸ್ಥಾನಕ್ಕಾಗಿ ಹೋರಾಡಬೇಕಿದೆ. ಇಂದಿನ ಅವರ ಪ್ರದರ್ಶನದ ಮೇಲೆ ಅವರ ಕ್ರಿಕೆಟ್​​ ಭವಿಷ್ಯವೇ ಅಡಗಿದೆ.

ಉತ್ತಮ ರೆಕಾರ್ಡ್​ ಹೊಂದಿದ್ರೂ ರಾಹುಲ್​ಗೆ ಯಾಕೆ ಭಯ..?

ಅಷ್ಟಕ್ಕೂ ಕೆ.ಎಲ್​ ರಾಹುಲ್​​ ಇಂದು ರಾಹುಲ್​​ ಒತ್ತಡದಲ್ಲಿರೋದ್ಯಕೆ ಗೊತ್ತಾ..? ತಂಡದಲ್ಲಿರುವ ಸಾಲು ಸಾಲು ಓಪನ್ನರ್'​​​ಗಳು. ಹೌದು, ಟೀಂ ಇಂಡಿಯಾದಲ್ಲಿ ಸದ್ಯ ರಾಹುಲ್​​ ಸೇರಿದಂತೆ ರೋಹಿತ್​ ಶರ್ಮಾ, ಶಿಖರ್​​ ಧವನ್​ ಮತ್ತು , ಅಜಿಂಕ್ಯಾ ರಹಾನೆ ಸೀಮಿತ ಓವರ್​​ಗಳ ಫಾರ್ಮೆಟ್'​​ನಲ್ಲಿ ಸ್ಥಾನ ಪಡೆದಿದ್ದಾರೆ. ಕೆ.ಎಲ್​ ರಾಹುಲ್​ನನ್ನ ಹೊರತು ಪಡಿಸಿದ್ರೆ ಇನ್ನೆಲ್ಲಾರೂ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದ್ರೆ ಆಯ್ಕೆ ಸಮಿತಿ ನಾಲಕ್ಕು ಆರಂಭಿಕರನ್ನ ಪ್ರತೀ ಸರಣಿಯಲ್ಲೂ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಲ್ವರಲ್ಲಿ ಒಬ್ಬರಿಗೆ ಕೋಕ್​​​ ಕೊಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದೇ ಕಾರಣಕ್ಕೆ ಎಂ.ಎಸ್​​​.ಕೆ ಪ್ರಸಾದ್​​​ ಕಣ್ಣು ರಾಹುಲ್​ ಮೇಲೆ ಬಿದ್ದಿದೆ.

ಇದೇ ತಿಂಗಳು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗ್ತಿದೆ. ಈ ಮಹತ್ವದ ಸರಣಿಗೆ ನಾಲ್ವರು ಆರಂಭಿಕರನ್ನ ಆಯ್ಕೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಆಯ್ಕೆ ಸಮಿತಿ ಫಾರ್ಮ್​ ಕಳೆದುಕೊಂಡು ಪರದಾಡುತ್ತಿರುವ ರಾಹುಲ್​ನನ್ನ ಇಂದು ಅಗ್ನಿ ಪರಿಕ್ಷೆಗೆ ದೂಡುತ್ತಿದೆ. ಇಂದು ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ ರಾಹುಲ್​ ಆಸೀಸ್​​​ ವಿರುದ್ಧ ಆಡಲಿದ್ದಾರೆ. ಇಲ್ಲವಾದ್ರೆ ಸೀಮಿತ ಓವರ್​​ಗಳ ಫಾರ್ಮೆಟ್​​ನಿಂದಲೇ ಗೇಟ್​​ ಪಾಸ್​​​ ಕೊಡಲಾಗುತ್ತೆ.

ಒಟ್ಟಿನಲ್ಲಿ ಇಂದು ಕನ್ನಡಿಗನ ಅಗ್ನಿ ಪರೀಕ್ಷೆ ನಡೆಯೋದಂತೂ ನಿಜ. ಈ ಪರೀಕ್ಷೆಯಲ್ಲಿ  ಪಾಸಾದ್ರೆ ಮಾತ್ರ ಉಳಿಗಾಲ ಇಲ್ಲವಾದ್ರೆ ಕೊಹ್ಲಿ ಭಂಟನಿಗೆ ಗೇಟ್​​ ಪಾಸ್​​​ ಗ್ಯಾರೆಂಟಿ. ಆದ್ರೆ ಹಾಗಾಗದಿರಲಿ ನಮ್ಮ ಕನ್ನಡಿಗ ಇಂದು ನಡೆಯೋ ಪಾಸಾಗಲಿ ಎಂಬ ಪ್ರಾರ್ಥನೆ ಕೋಟ್ಯಅಂತರ ಕನ್ನಡಿಗರ ಪ್ರಾರ್ಥನೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆ್ಯಶಸ್‌ ಮೂರನೇ ಟೆಸ್ಟ್‌ನಲ್ಲಿ ಭುಗಿಲೆದ್ದ ಸ್ನಿಕೋ ಮೀಟರ್ ವಿವಾದ!
Ind vs SA 5th T20I: ಇಂದು ಭಾರತ vs ದಕ್ಷಿಣ ಆಫ್ರಿಕಾ ಫೈನಲ್ ಫೈಟ್