ಆರ್'ಸಿಬಿಗೆ 10 ವಿಕೇಟ್ ಜಯ : ಪ್ಲೇಆಫ್ ಆಸೆ ಜೀವಂತ

First Published May 14, 2018, 10:28 PM IST
Highlights

ಕೊಹ್ಲಿ(48),ಪಾರ್ಥೀವ್ ಪಟೇಲ್(40)  ಉತ್ತಮ ಭರ್ಜರಿ ಆಟವಾಡಿ ಗೆಲುವಿನ ಮುನ್ನಡಿ ಬರೆದರು. 2 ತಂಡಗಳ 40 ಓವರ್'ಗಳ ಆಟ ಕೇವಲ 23.2 ಓವರ್'ಗಳಲ್ಲಿ ಸಮಾಪ್ತಿಗೊಂಡಿತು. ಈ ಗೆಲುವಿನಿಂದಾಗಿ ಆರ್'ಸಿಬಿಗೆ ತಾಂತ್ರಿಕವಾಗಿ ಪ್ಲೇಆಪ್ ಕನಸು ಜೀವಂತವಾಗಿದೆ.   

ಇಂಧೋರ್(ಮೇ.14): ಪಂಜಾಬ್ ನೀಡಿದ್ದ ಕನಿಷ್ಠ ೮೯ ರನ್ ಗುರಿಯನ್ನು ಆರ್'ಸಿಬಿ 8.1 ಓವರ್'ಗಳಲ್ಲಿ  ವಿಕೇಟ್ ನಷ್ಟವಿಲ್ಲದೆ ಗುರಿ ಮುಟ್ಟಿದರು.
ಕೊಹ್ಲಿ(48),ಪಾರ್ಥೀವ್ ಪಟೇಲ್(40)  ಉತ್ತಮ ಭರ್ಜರಿ ಆಟವಾಡಿ ಗೆಲುವಿನ ಮುನ್ನಡಿ ಬರೆದರು. 2 ತಂಡಗಳ 40 ಓವರ್'ಗಳ ಆಟ ಕೇವಲ 23.2 ಓವರ್'ಗಳಲ್ಲಿ ಸಮಾಪ್ತಿಗೊಂಡಿತು. ಈ ಗೆಲುವಿನಿಂದಾಗಿ ಆರ್'ಸಿಬಿಗೆ ತಾಂತ್ರಿಕವಾಗಿ ಪ್ಲೇಆಪ್ ಕನಸು ಜೀವಂತವಾಗಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಪಡೆ ಉಮೇಶ್ ಯಾದವ್ ಮತ್ತವರ ದಾಳಿಗೆ ಕಿಂಗ್ಸ್ ಇಲವೆನ್ ತಂಡವನ್ನು 15.1 ಓವರ್'ಗಳಲ್ಲಿ  88 ರನ್'ಗಳಿಗೆ ಆಲ್ಔಟ್ ಮಾಡಿತು. 
ಫಿಂಚ್(26) ಹಾಗೂ ಕೆ.ಎಲ್ ರಾಹುಲ್(21), ಗೇಲ್(18) ರನ್ ಗಳಿಸಿದ್ದು  ಬಿಟ್ಟರೆ ಉಳಿದ ಬ್ಯಾಟ್ಸ್'ಮನ್'ಗಳು ಸಂಪೂರ್ಣ ವಿಫಲರಾದರು.
ಉಮೇಶ್ ಯಾದವ್ 23/3, ಸಿರಾಜ್, ಚಹಾಲ್, ಗ್ರಾಂಡ್'ಹೊಮ್ಮೆ, ಅಲಿ ತಲಾ ಒಂದೊಂದು ವಿಕೇಟ್ ಪಡೆದರು.

ಸ್ಕೋರ್ 
ಪಂಜಾಬ್ 15.1 ಓವರ್'ಗಳಲ್ಲಿ  88
( ಫಿಂಚ್(26), ಕೆ.ಎಲ್ ರಾಹುಲ್(21),ಉಮೇಶ್ ಯಾದವ್ 23/3 )

ಆರ್'ಸಿಬಿ 8.1 ಓವರ್'ಗಳಲ್ಲಿ 92/0
(ಕೊಹ್ಲಿ 48 , ಪಾರ್ಥೀವ್ 40)

ಫಲಿತಾಂಶ: ಆರ್'ಸಿಬಿಗೆ 10 ವಿಕೇಟ್ ಜಯ
 
click me!