ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡಿಗರಿಗೆ ಕನ್ನಡಿಗರ ಸವಾಲ್: ಮೈದಾನಕ್ಕಿಳಿಯಲಿದ್ದಾರೆ ನಾಲ್ವರು ಕನ್ನಡಿಗರು

Published : Apr 08, 2017, 06:47 AM ISTUpdated : Apr 11, 2018, 12:47 PM IST
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡಿಗರಿಗೆ ಕನ್ನಡಿಗರ ಸವಾಲ್: ಮೈದಾನಕ್ಕಿಳಿಯಲಿದ್ದಾರೆ ನಾಲ್ವರು ಕನ್ನಡಿಗರು

ಸಾರಾಂಶ

ಚಿನ್ನಸ್ವಾಮಿಯಲ್ಲಿ ಇವತ್ತು ನಡೆಯಲಿರುವುದು ಬೆಂಗಳೂರು- ಡೆಲ್ಲಿ ಪಂದ್ಯ, ಇದು ಕೇವಲ ಹೆಸರಿಗೆ ಮಾತ್ರ. ಇದು ಕನ್ನಡಿಗರ ನಡುವಿನ ಆಟವೆಂದೇ ಹೇಳಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಎರಡೂ ತಂಡಗಳಲ್ಲಿ ಕರ್ನಾಟಕದ ಆಟಗಾರರಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯ ಹೆಚ್ಚು ಮಹತ್ವ ಪಡೆದಿರುವುದೇ ಕರ್ನಾಟಕದ ಆಟಗಾರರಿಂದ.

ಬೆಂಗಳೂರು(ಎ.08): ಚಿನ್ನಸ್ವಾಮಿಯಲ್ಲಿ ಇವತ್ತು ನಡೆಯಲಿರುವುದು ಬೆಂಗಳೂರು- ಡೆಲ್ಲಿ ಪಂದ್ಯ, ಇದು ಕೇವಲ ಹೆಸರಿಗೆ ಮಾತ್ರ. ಇದು ಕನ್ನಡಿಗರ ನಡುವಿನ ಆಟವೆಂದೇ ಹೇಳಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಎರಡೂ ತಂಡಗಳಲ್ಲಿ ಕರ್ನಾಟಕದ ಆಟಗಾರರಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯ ಹೆಚ್ಚು ಮಹತ್ವ ಪಡೆದಿರುವುದೇ ಕರ್ನಾಟಕದ ಆಟಗಾರರಿಂದ.

ಆರ್‌ಸಿಬಿಯ ಲೋಕಲ್ ಪ್ಲೇಯರ್ ಬಿನ್ನಿ

ರಾಯಲ್ ಚಾಲೆಂಜರ್ಸ್ ಪರ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ  ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರು ಪಿಚ್‌ನಲ್ಲಿ ಆಡಿ ಬೆಳೆದಿರುವ ಬಿನ್ನಿ, ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಮೊದಲ ಪಂದ್ಯದಲ್ಲಿ 1 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆದಿದ್ದ ಬಿನ್ನಿ ಗಮನ ಸೆಳೆದಿದ್ದರು. ಆದರೆ ಬ್ಯಾಟಿಂಗ್‌'ನಲ್ಲಿ ಬೇಗ ಔಟಾಗಿ ನಿರಾಸೆ ಮೂಡಿಸಿದ್ದರು. ಇಂದಿನ ಪಂದ್ಯದಲ್ಲಿ ಬಿನ್ನಿಯಿಂದ ಆಲ್‌ರೌಂಡರ್ ಆಟವನ್ನು ನಿರೀಕ್ಷಿಸಬಹುದಾಗಿದೆ.

ತವರಿನ ಲಾಭ ಪಡೆಯುತ್ತಾರಾ ಅರವಿಂದ್..?

ಆರ್‌ಸಿಬಿಯ ಎಡಗೈ ವೇಗಿ ಎಸ್.ಅರವಿಂದ್‌ಗೂ ಚಿನ್ನಸ್ವಾಮಿ ಹೋಮ್ ಗ್ರೌಂಡ್. ಐಪಿಎಲ್‌ನಲ್ಲಿ ಅರವಿಂದ್ ಕೆಲವೇ ಪಂದ್ಯಗಳನ್ನ ಆಡಿರಬಹುದು. ಆದ್ರೆ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಸ್ವಲ್ಪ ದುಬಾರಿ ಅನ್ನಿಸಿದ್ದರು. ಈ ಪಂದ್ಯ ತವರಿನಲ್ಲಿ ನಡೆಯುತ್ತಿರುವುದರಿಂದ ಅರವಿಂದ್‌ಗೆ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ಚಿನ್ನಸ್ವಾಮಿಯಲ್ಲಿ ಗೇಮ್ ಬದಲಾಯಿಸುವ ಕ್ಷಮತೆ ಶ್ರೀನಾಥ್ ಅರವಿಂದ್‌'ರಲ್ಲಿದೆ.

ತ್ರಿಶತಕ ವೀರ ಕರುಣ್‌'ಗೂ ತವರಿನ ಗ್ರ್ಯೌಂಡ್​

ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಆಡುತ್ತಿರುವ ಕನ್ನಡಿಗ ತ್ರಿಶತಕ ವೀರ ಕರುಣ್ ನಾಯರ್  ಚಿನ್ನಸ್ವಾಮಿ ಚಿನ್ನದಂಥ ಗ್ರೌಂಡ್. ಬೆಂಗಳೂರು ಹುಡುಗನಾಗಿ ಬೆಂಗಳೂರು ತಂಡದ ವಿರುದ್ಧವೇ ಇವತ್ತು ತೊಡೆ ತಟ್ಟುತ್ತಿದ್ದಾರೆ. ಇನ್ನೂ ಕರುಣ್ ನಾಯರ್‌, ಅರವಿಂದ್, ಸ್ಟುವರ್ಟ್ ಬಿನ್ನಿ ಕರ್ನಾಟಕದ ತಂಡ ಪರ ಆಡಿ ಎಷ್ಟೇ ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಇದೀಗ ಈ ಮೂವರು ಆಟಗಾರರು ಬದ್ಧವೈರಿಗಳಾಗಿ ಕಾದಾಡಲು ಸಿದ್ಧರಾಗಿದ್ದಾರೆ.

ಈ ಪಂದ್ಯದ ಪ್ರಮುಖ ಅಟ್ರ್ಯಾಕ್ಷನ್ ದ್ರಾವಿಡ್

ಆರ್‌ಸಿಬಿ ಡೆಲ್ಲಿ ಪಂದ್ಯದ ಅಟ್ರ್ಯಾಕ್ಷನ್ ಅಂದರೆ ಅದು ರಾಹುಲ್ ದ್ರಾವಿಡ್.  ಒಂದು ಕಾಲದಲ್ಲಿ ಆರ್‌ಸಿಬಿ ತಂಡದ ನಾಯಕರಾಗಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದಾರೆ. ಇವತ್ತು ಡೆಲ್ಲಿ ತಂಡ ಮೆಂಟರ್ ಆಗಿ ಡೆಲ್ಲಿ ಆಟಗಾರರ ಬೆನ್ನಿಗೆ ನಿಂತಿದ್ದಾರೆ. ಬೆಂಗಳೂರನಲ್ಲಿ ದಿ ಗ್ರೇಟ್ ವಾಲ್‌ಗೆ ಅಭಿಮಾನಿಗಳ ದೊಡ್ಡ ದಂಡೇ ಇದೆ. ಒಟ್ಟಾರೆ ಈ ನಾಲ್ವರು ಕನ್ನಡಿಗರಿಂದಾಗಿ ಇವತ್ತಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?