ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಸೋಲಿಗೆ ಸಾಕ್ಷಿಯಾಗಿದೆ. ಈ ಮೂಲಕ ಡೆಲ್ಲಿ ವಿರುದ್ಧವೇ ಡೆಲ್ಲಿ ದಾಖಲೆಯನ್ನು RCB ಸರಿಗಟ್ಟಿದೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ...
ಬೆಂಗಳೂರು[ಏ.07]: ಸೋಲು... ಸೋಲು... ಸೋಲು... ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಸ್ಥಿತಿಗತಿ. ವಿಕ್ರಾಮಾದಿತ್ಯನ ಕಥೆಯಲ್ಲಿ ಬರುವ ಬೇತಾಳನಂತೆ ವಿರಾಟ್ ಪಡೆಗೆ ಸೋಲು ಬೆನ್ನತ್ತಿದೆ. 12ನೇ ಆವೃತ್ತಿಯ ಐಪಿಎಲ್’ನಲ್ಲಿ ಒಂದರ ಮೇಲೊಂದರಂತೆ ಸತತ 6 ಸೋಲು ಕಂಡಿರುವ RCB ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋಲುಂಡಿದೆ. ಇದರೊಂದಿಗೆ RCB ತಂಡವು ಡೆಲ್ಲಿ ಜತೆಗೆ ಸೋಲಿನಲ್ಲೂ ನಂ.1 ಸ್ಥಾನಕ್ಕೇರುವ ಮೂಲಕ ಕುಖ್ಯಾತಿಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.
ಸತತ 6ನೇ ಸೋಲಿಗೆ ಸಾಕ್ಷಿಯಾದ RCB..!
undefined
ಹೌದು, ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ RCB 12ನೇ ಆವೃತ್ತಿಯ ಐಪಿಎಲ್’ನಲ್ಲಿ ಸತತ 6ನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ದಾಖಲೆಯನ್ನು ಸರಿಗಟ್ಟಿದೆ. ಈ ಮೊದಲು 2013ರಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ತಂಡವು ಸತತ 6 ಸೋಲುಗಳನ್ನು ಕಂಡಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್’ಗೆ ವಿರಾಟ್ ಪಡೆ ಶರಣಾಗುವ ಮೂಲಕ ಡೆಲ್ಲಿ ಜತೆಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಸತತ 5 ಸೋಲು ಕಂಡಿದ್ದ ಡೆಕ್ಕನ್ ಚಾರ್ಜರ್ಸ್[2012] ಎರಡನೇ ಸ್ಥಾನದಲ್ಲಿದೆ.
ಪ್ರಸ್ತುತ 6 ಪಂದ್ಯಗಳಲ್ಲಿ RCB ಸೋತಿದ್ದರೂ ಪ್ಲೇ ಆಫ್ ಪ್ರವೇಶದ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನು 8 ಪಂದ್ಯಗಳನ್ನು ಉತ್ತಮ ರನ್ ಸರಾಸರಿಯಲ್ಲಿ ಜಯಿಸಿದರೆ ಬೆಂಗಳೂರು ತಂಡವು ಪ್ಲೇ ಆಫ್ ಹಂತ ಪ್ರವೇಶಿಸಬಹುದಾಗಿದೆ.
ಸತತ ಸೋಲು ಕಂಡ ತಂಡಗಳ ಪಟ್ಟಿ ಇಲ್ಲಿದೆ ನೋಡಿ..
ತಂಡ | ತಂಡ | ಆವೃತ್ತಿ | ಅಂತಿಮ ಸ್ಥಾನ |
06 | DC | 2013 | 09 |
06 | RCB | 2019* | 08* |
05 | DC | 2012 | 08 |
05 | MI | 2014 | 04 |
04 | MI | 2008 | 05 |
04 | MI | 2015 | 01 |
(* RCB ಇನ್ನೂ 8 ಪಂದ್ಯ ಆಡಬೇಕಿದೆ.
DC- ಡೆಕ್ಕನ್ ಚಾರ್ಜರ್ಸ್. DD- ಡೆಲ್ಲಿ ಡೇರ್’ಡೆವಿಲ್ಸ್)